ಪ್ರವಾಸೋದ್ಯಮ

ರಾಮ ಮಂದಿರ ಕೇವಲ ಧಾರ್ಮಿಕವಾಗಿ ಮಾತ್ರವಲ್ಲ.. ಭಾರತದ ಆರ್ಥಿಕತೆಗೂ ರಾಮಬಲ.. ಇನ್ಮುಂದೆ ರಾಮಜನ್ಮಭೂಮಿ ಜಾಗತಿಕ ಮಟ್ಟದಲ್ಲಿ ಪ್ರಜ್ವಲನೆ

Views: 20

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಗತವೈಭವ ಮರುಕಳಿಸಿದೆ. ಮೊದಲ ದಿನದಿಂದಲೇ ಭಕ್ತ ಸಾಗರವೇ ಅಯೋಧ್ಯೆಯತ್ತ ಹರಿದು ಬರಲಾರಂಭಿಸಿದೆ. ಅಂದಾಜಿನ ಪ್ರಕಾರ ಭಕ್ತರ ಭೇಟಿ ವಿಚಾರದಲ್ಲಿ ಅಯೋಧ್ಯೆ ಜಗತ್ತಿನಲ್ಲೇ ಅತಿ ದೊಡ್ಡ ಪವಿತ್ರ ಯಾತ್ರಾ ತಾಣವಾಗುವ ಸೂಚನೆಗಳು ಕಾಣಿಸ್ತಿವೆ.

ರಾಮ ಮಂದಿರ ಕೇವಲ ಧಾರ್ಮಿಕವಾಗಿ ಮಾತ್ರವಲ್ಲ.. ಭಾರತದ ಆರ್ಥಿಕತೆಗೂ ರಾಮಬಲ ತಂದು ಕೊಡಲಿದೆ ಎಂಬ ಮುನ್ಸೂಚನೆ ದೊರೆತಿದೆ.

ಭಕ್ತರ ಬೇಟಿ ಇತಿಹಾಸ ನಿರ್ಮಾಣ..!?

ಕೋಟ್ಯಂತರ ಹಿಂದೂಗಳ ಪವಿತ್ರ ತಾಣವಾದ ಅಯೋಧ್ಯೆಗೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಮೊದಲ ದಿನದಿಂದಲೇ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡಲಾರಂಭಿಸಿರೋದು ಇತಿಹಾಸವೇ ನಿರ್ಮಾಣದ ಸೂಚನೆ ಕೊಟ್ಟಿದೆ. ವಿಶ್ವದಲ್ಲೇ ಅತಿ ಹೆಚ್ಚು ಭಕ್ತರನ್ನು ಸೆಳೆಯುವ ಕ್ಷೇತ್ರವಾಗಿ ಹೆಗ್ಗಳಿಕೆಗೆ ಪಾತ್ರವಾಗುವತ್ತ ಸಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಭಕ್ತರ ಭೇಟಿಯ ವಿಚಾರದಲ್ಲಿ ಮೆಕ್ಕಾ ಮತ್ತು ವ್ಯಾಟಿಕನ್‌ ಸಿಟಿಯನ್ನೇ ಹಿಂದಿಕ್ಕುವ ಸಾಧ್ಯತೆಗಳು ಕಾಣಿಸ್ತಿವೆ.

ಮೆಕ್ಕಾ, ವ್ಯಾಟಿಕನ್​ ನಗರಕ್ಕೆ ವಾರ್ಷಿಕ ಸುಮಾರು 3 ಕೋಟಿ ಜನರು ಭೇಟಿ ನೀಡುತ್ತಾರೆ. ಇನ್ನು ಅಯೋಧ್ಯೆಗೆ ವಾರ್ಷಿಕ 3ರಿಂದ 5 ಕೋಟಿ ಭಕ್ತರು ಭೇಟಿ ಸಾಧ್ಯತೆ ಇದೆ. 2019ಕ್ಕೂ ಮೊದಲು ಹಳೆಯ ರಾಮಲಲ್ಲಾ ದರ್ಶನಕ್ಕೆ ನಿತ್ಯ 3 ಸಾವಿರ ಭಕ್ತರು ಬರ್ತಿದ್ರು. ಆದ್ರೆ 2024ರ ಜನವರಿ 1ರಂದೇ 50 ಸಾವಿರ ಭಕ್ತರು ರಾಮಲಲ್ಲಾ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಇದೀಗ ನೂತನ ಮಂದಿರ ಲೋಕಾರ್ಪಣೆಯಾಗಿದ್ದು ನಿತ್ಯ 1ರಿಂದ 1.50 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.

ವಾರ್ಷಿಕ 3 ರಿಂದ 5 ಕೋಟಿ ಭಕ್ತರು ಭೇಟಿ ನೀಡುವ ಅಂದಾಜು ಇದೆ. ಈ ಮೂಲಕ ಜಾಗತಿಕ ಆಧ್ಯಾತ್ಮದ ಪ್ರವಾಸಿ ತಾಣವಾಗಿಯೂ ಅಯೋಧ್ಯೆ ಬೆಳೆಯಲಿದೆ. ಸದ್ಯ ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಬರೋಬ್ಬರಿ 100 ಕೋಟಿ ಇದೆ. ವಿಶ್ವದ ಬೇರೆ ಬೇರೆ ದೇಶಗಳಲ್ಲೂ ಲಕ್ಷಾಂತರ ಹಿಂದೂಗಳು ನೆಲೆಸಿದ್ದಾರೆ. ಹಿಂದೂಗಳ ಪವಿತ್ರ ಸ್ಥಳವಾಗಿರುವ ಅಯೋಧ್ಯೆ ವಿಶ್ವದೆಲ್ಲೆಡೆಯಿಂದ ಭಕ್ತರ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ. ಹೀಗಾಗಿ ಹಿಂದೂಗಳ ಪವಿತ್ರ ಸ್ಥಳ ಅಯೋಧ್ಯೆ, ಭಕ್ತರ ಭೇಟಿ ವಿಚಾರದಲ್ಲಿ ಮೆಕ್ಕಾ, ವ್ಯಾಟಿಕನ್​ ನಗರವನ್ನು ಮೀರಿಸಲಿದೆ.

ಆರ್ಥಿಕವಾಗಿಯೂ ಅಯೋಧ್ಯೆಗೆ ರಾಮಬಲ!

ಐನೂರು ವರ್ಷಗಳ ನಂತರ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗೊಂಡಿದ್ದಾನೆ. ಈಗಾಗಲೇ ಸಾಗರೋಪಾದಿಯನ್ನು ಭಕ್ತರು ರಾಮಜನ್ಮಭೂಮಿಗೆ ಹರಿದು ಬರುತ್ತಿದ್ದು, ರಾಮನ ದರ್ಶನ ಪಡೆದು ಪುನೀತರಾಗ್ತಿದ್ದಾರೆ.. ಅಯೋಧ್ಯೆ ಧಾರ್ಮಿಕವಾಗಿ ಮಾತ್ರವಲ್ಲ ಪ್ರವಾಸೋದ್ಯಮ ಭಾರೀ ಮಟ್ಟದಲ್ಲಿ ಬೆಳೆಯಲಿದೆ.. ಇದರಿಂದ ಆರ್ಥಿಕವಾಗಿಯೂ ಅಯೋಧ್ಯೆಯಲ್ಲಿ ಹೆಚ್ಚಿನ ವಹಿವಾಟು ನಡೆಯಲಿದೆ.

ಅಯೋಧ್ಯೆಯಲ್ಲಿ ವಾರ್ಷಿಕ 55 ಸಾವಿರ ಕೋಟಿ ರೂ ವಹಿವಾಟು

ಅಯೋಧ್ಯೆಯಲ್ಲಿ ವಾರ್ಷಿಕ 55 ಸಾವಿರ ಕೋಟಿ ರೂ ವಹಿವಾಟು ನಡೆಯುವ ನಿರೀಕ್ಷೆ ಇದೆ. ಸಾರಿಗೆ, ಪ್ರವಾಸೋದ್ಯಮ, ಹೋಟೆಲ್, ವಸತಿ ಕ್ಷೇತ್ರಗಳಲ್ಲಿ ಹೆಚ್ಚಿನ ವಹಿವಾಟು ನಡೆಯಲಿದೆ. ರಾಮ ಮಂದಿರ ನಿರ್ಮಾಣದಿಂದ ವಾರ್ಷಿಕ 1 ಲಕ್ಷ ಕೋಟಿ ರೂ ವಹಿವಾಟಿನ ಲೆಕ್ಕಾಚಾರ ಇದೆ. ಉತ್ತರ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ದಿಯಿಂದ ದೇಶದ ಜಿಡಿಪಿ ವೃದ್ದಿಗೂ ಬಹುದೊಡ್ಡ ಕೊಡುಗೆ ಸಿಗಲಿದೆ.

ಒಟ್ಟಾರೆ ಐನೂರು ವರ್ಷಗಳ ಬಳಿಕ ಭಾರತಕ್ಕೆ ರಾಮ ಬಲ ಸಿಕ್ಕಿದೆ. ಆಧ್ಯಾತ್ಮಿಕ ಕ್ಷೇತ್ರವಾಗಿ ಇನ್ಮುಂದೆ ರಾಮಜನ್ಮಭೂಮಿ ಜಾಗತಿಕ ಮಟ್ಟದಲ್ಲಿ ಪ್ರಜ್ವಲಿಸಲಿದೆ.

Related Articles

Back to top button