ಪ್ರವಾಸೋದ್ಯಮ

ಗೂಗಲ್ ಮ್ಯಾಪ್ ತಪ್ಪಾದ ದಾರಿ.. ಕೊಲ್ಲೂರು ಮೂಕಾಂಬಿಕಾ ಬದಲಿಗೆ ನಂದಳಿಕೆಗೆ ಪ್ರಯಾಣಿಸಿದ ಪ್ರವಾಸಿಗರು! 

Views: 158

ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರಯಾಣಿಸುವ ನೂರಾರು ಪ್ರವಾಸಿಗರನ್ನು ದೂರದ ನಂದಳಿಕೆ ಗ್ರಾಮ ತಲುಪುತ್ತಿಸಿರುವ ವಿದ್ಯಾಮಾನ ನಡೆದಿದೆ.

ಗೂಗಲ್‌ ಮ್ಯಾಪ್‌ ನೋಡಿಕೊಂಡು ಕೊಲ್ಲೂರು ಪಯಣಿಸುವವರು ನಂದಳಿಕೆ ತಲುಪುತ್ತಿದ್ದಾರೆ. ನಂದಳಿಕೆಯನ್ನು ತಲುಪಿದ ನಂತರ ಮತ್ತೆ ನೂರಾರು ಕಿ.ಮೀ ದೂರದ ಕೊಲ್ಲೂರಿಗೆ ಮರಳಿ ಪಯಣಿಸುವ ದುರವಸ್ಥೆ ಸೃಷ್ಟಿಯಾಗಿದೆ.

ನಂದಳಿಕೆಯಲ್ಲಿ ಮೂಕಾಂಬಿಕಾ ದೇವಿ ಎಂದು ಸಣ್ಣ ದೇವಾಲಯವಿದೆ. ಇದನ್ನು ಗೂಗಲ್‌ ನಕ್ಷೆಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಾಲಯ ಎಂದು ಪಟ್ಟಿ ಮಾಡಲಾಗಿದೆ. ಪ್ರವಾಸಿಗರು ಮತ್ತು ಭಕ್ತರು, ಈ ವ್ಯತ್ಯಾಸ ಅರಿಯದೆ ನಂದಳಿಕೆ ತಲುಪುತ್ತಿದ್ದಾರೆ ಎಂದು ನಂದಳಿಕೆ ನಿವಾಸಿಗಳು ತಿಳಿಸಿದ್ದಾರೆ.

ಗೂಗಲ್ ಮ್ಯಾಪ್ ತಪ್ಪಾಗಿ ದಾರಿ ತೋರಿಸುತ್ತಿರುವುದರಿಂದ ನಂದಳಿಕೆಗೆ ಪ್ರತಿನಿತ್ಯ ಹಲವಾರು ವಾಹನಗಳು ಬರುತ್ತಿವೆ. ಕೆಲ ಕಾರುಗಳು ತಡರಾತ್ರಿಯೂ ಬರುತ್ತವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಅನೇಕ ಪ್ರವಾಸಿಗರು ಮತ್ತು ಭಕ್ತರು ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

 

Related Articles

Back to top button
error: Content is protected !!