ರಾಜಕೀಯ

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಸಿ.ಟಿ. ರವಿ, ವಿರೋಧ ಪಕ್ಷದ ನಾಯಕ ಯತ್ನಾಳ್?

Views: 0

ವಿಧಾನಸಭೆಯ ಅಧಿವೇಶನದಲ್ಲಿ ನಾಯಕರಿಲ್ಲದೆ ಸರ್ಕಾರವನ್ನು ಸಮರ್ಥವಾಗಿ ಸಾಮೂಹಿಕವಾಗಿ ಎದುರಿಸಲಾಗಿತ್ತು, ವಿರೋಧ ಪಕ್ಷದ ನಾಯಕನಿಲ್ಲದೆ ಅಧಿವೇಶನ ನಡೆದಿದೆ ಎಂಬುದಾಗಿ ಕಾಂಗ್ರೆಸ್ ವ್ಯಂಗ್ಯ ಮಾಡಿತ್ತು,

ಇದೀಗ ಬಿ.ಎಲ್ ಸಂತೋಷ್ ರಾಜ್ಯಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ವಿವಿಧ ಸಭೆಗಳಲ್ಲಿ ಮತ್ತು ಎಲ್ಲಾ ಕಡೆಯಿಂದಲೂ ಬಂದಿರುವ ಸಲಹೆ ಮತ್ತು ಮಾಹಿತಿಯಂತೆ ಸಿಟಿ ರವಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮತ್ತು ವಿರೋಧ ಪಕ್ಷದ ನಾಯಕನನ್ನಾಗಿ ಬಸವನ ಗೌಡ ಪಾಟೀಲ್ ಯತ್ನಾಳ್ ಅವರನ್ನು ನೇಮಕ ಮಾಡಬೇಕು ಎಂಬ ಸಲಹೆಯಂತೆ, ಶೀಘ್ರವೇ ನೇಮಿಸುವ ಚಿಂತನೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Related Articles

Back to top button