ಜನಮನ

ರಾಜ್ಯಾದ್ಯಂತ ಭಾರಿ ಮಳೆ ಮುನ್ಸೂಚನೆ: ಈ 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

Views: 315

ಕನ್ನಡ ಕರಾವಳಿ ಸುದ್ದಿ: ರಾಜ್ಯಾದ್ಯಂತ ಜೂನ್ 23ರವರೆಗೂ ಭಾರಿ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಈ 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಈ ಅವಧಿಯಲ್ಲಿ 202 ಮಿ.ಮೀವರೆಗೆ ಮಳೆಯಾಗಲಿದೆ. ಕೊಡಗು, ಹಾಸನ, ಬೆಳಗಾವಿ ಜಿಲ್ಲೆಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ.

ಧಾರವಾಡ, ಹಾವೇರಿ, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದ ಕಡೆಗಳಲ್ಲಿ ಸಾಧಾರಣ ಮಳೆ ಆಗಬಹುದು. ಬೆಂಗಳೂರಿನಲ್ಲಿ ಮುಂದಿನ 2 ದಿನ ಭಾಗಶಃ ಮೋಡ ಕವಿದ ವಾತಾವರಣದೊಂದಿಗೆ ಹಗುರ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಉತ್ತರ ಕನ್ನಡದ ಮಂಕಿಯಲ್ಲಿ 270 ಮಿಮೀ, ಉಡುಪಿಯ ಸಿದ್ದಾಪುರದಲ್ಲಿ 252, ಕದ್ರಿಯಲ್ಲಿ 148 ಹಾಗೂ ಕುಂದಾಪುರ 172 ಮಿಮೀ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ವಿಜಯನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್ನಲ್ಲಿ ಮಳೆಯಾಗಲಿದೆ.

ಪಣಂಬೂರು, ಗೇರುಸೊಪ್ಪ, ಕುಂದಾಪುರ, ಉಪ್ಪಿನಂಗಡಿ, ಕದ್ರಿ, ಬಂಟವಾಳ, ಕೋಟಾ, ಹೊನ್ನಾವರ, ಕುಮಟಾ, ಧರ್ಮಸ್ಥಳ, ಮಾಣಿ, ಪುತ್ತೂರು, ಭಾಗಮಂಡಲದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಮುಲ್ಕಿ, ಉಡುಪಿ, ಅಂಕೋಲಾ, ಯಲ್ಲಾಪುರ, ಶೃಂಗೇರಿ, ಕಳಸ, ಸುಳ್ಯ, ಜೋಯ್ಡಾ, ಕಿತ್ತೂರು, ಖಾನಾಪುರ, ಹುಂಚದಕಟ್ಟೆಯಲ್ಲಿ ಕೂಡ ಮಳೆಯಾಗಿದೆ.

ಕೊಪ್ಪ, ವಿರಾಜಪೇಟೆ, ನಾಪೋಕ್ಲು, ಗೋಕರ್ಣ, ಬನವಾಸಿ, ಹಳಿಯಾಳ, ಬೆಳಗಾವಿ, ನಿಪ್ಪಾಣಿ, ಸಂಕೇಶ್ವರ, ಪೊನ್ನಂಪೇಟೆ, ಬಾಳೆಹೊನ್ನೂರು, ಎನ್ಆರ್ಪುರ, ಹುಕ್ಕೇರಿ, ಹಿಡಕಲ್, ಚಿಕ್ಕೋಡಿ, ಬೈಲಹೊಂಗಲ, ಧಾರವಾಡ, ಗೋಕಾಕ್, ಚಿಕ್ಕೋಡಿ, ಶಿಗ್ಗಾಂವ್, ಜಗಳೂರು, ಭದ್ರಾವತಿ, ಕಡೂರು, ಹೊನ್ನಾಳಿ, ಬಂಡೀಪುರ, ಬೇಳೂರು, ಹಾರಂಗಿಯಲ್ಲೂ ಮಳೆ ಬಿದ್ದಿದೆ.

 

Related Articles

Back to top button
error: Content is protected !!