ಇತರೆ
ಬಿಸಿಲು ತಾಪಮಾನ ತಾಳಲಾರದೆ 15 ವರ್ಷದ ಬಾಲಕ ಆಟವಾಡುತ್ತಿರುವಾಗಲೇ ಸಾವು
Views: 186
ಕನ್ನಡ ಕರಾವಳಿ ಸುದ್ದಿ:ರಾಜ್ಯದಲ್ಲಿ ನಿತ್ಯವೂ ಬಿಸಿಲು ಹೆಚ್ಚಾಗುತ್ತಲೇ ಇದ್ದು, ತಾಪಮಾನ ತಾಳಲಾರದೆ 15 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಮುದ್ದೇಬಿಹಾಳದ ಇಂಗಳಗಿ ಗ್ರಾಮದ ಬಾಲಕ ಶ್ರೀಶೈಲ ಬಿರಾದರ ಮೃತರು. ಈತ ಶಾಲೆಗೆ ರಜೆ ಇದ್ದ ಕಾರಣ ಮಧ್ಯಾಹ್ನವೂ ಬಿಸಿಲಿನಲ್ಲಿಯೇ ಆಟ ಆಡಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಸುಸ್ತು ಎಂದು ಹೇಳಿದ್ದಾನೆ.
ಇದಾದ ಕೆಲವೇ ಸಮಯಕ್ಕೆ ಕುಸಿದು ಬಿದ್ದಿದ್ದಾನೆ. ಪೋಷಕರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪೊಲೀಸರು ಶ್ರೀಶೈಲ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.






