ಜನಮನ

ರಸ್ತೆ ಸಂಪರ್ಕದ ಇಲ್ಲದೆ ಮೃತದೇಹ ಬೈಕ್‌ನಲ್ಲಿ ಸಾಗಿಸಿದ ಹೃದಯವಿದ್ರಾಹಕ ಘಟನೆ

Views: 80

ಸಾರಿಗೆ ಸೌಲಭ್ಯ ಮತ್ತು ರಸ್ತೆ ಸಂಪರ್ಕದ ಕೊರತೆಯಿಂದಾಗಿ ಬುಡಕಟ್ಟು ಸಮುದಾಯದ ವ್ಯಕ್ತಿಯೋರ್ವರು ತನ್ನ ಪತ್ನಿಯ ಮೃತದೇಹವನ್ನು ಆಸ್ಪತ್ರೆಯಿಂದ ದ್ವಿಚಕ್ರ ವಾಹನದಲ್ಲಿ ಸಾಗಿಸಿದ ಹೃದಯವಿದ್ರಾಹಕ ಘಟನೆ ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.

ಮಂಡಲ ಗಂಗುಲು ಅವರ ಪತ್ನಿ ಗಣಮ್ಮ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಚಿಟ್ಟೆಂಪಾಡು ಗ್ರಾಮಕ್ಕೆ ಶವವನ್ನು ಸಾಗಿಸಲು ಸರಿಯಾದ ಆಂಬ್ಯುಲೆನ್ಸ್‌ ವ್ಯವಸ್ಥೆ ಮತ್ತು ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಗಂಗುಲು ಎಂಬವರು ತನ್ನ ಪತ್ನಿ ಗಣಮ್ಮ ಅವರ ಶವವನ್ನು ಬೈಕ್‌ನಲ್ಲಿ ಸಾಗಿಸಿದ್ದಾರೆ.

ಕೆಲವು ದಿನಗಳ ಹಿಂದೆ ಗಂಗಮ್ಮ ಮತ್ತು ಅವರ ಮಗ ಅನಾರೋಗ್ಯಕ್ಕೆ ತುತ್ತಾಗಿದ್ದರು. ರಸ್ತೆ ಹದಗೆಟ್ಟ ಕಾರಣ ಗಂಗುಲು ಪತ್ನಿ-ಮಗನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದ ಕಾರಣ, ಅವರು ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಅವರನ್ನು ಐದು ಕಿಲೋಮೀಟರ್‌ಗಳವರೆಗೆ ಸಾಗಿಸಿದ್ದರು. ವಿಶಾಖಪಟ್ಟಣಕ್ಕೆ ಸ್ಥಳಾಂತರಿಸುವಾಗ ಮಗು ಜನವರಿ 7ರಂದು ಸಾವನ್ನಪ್ಪಿತ್ತು. ಆತನ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಗಂಗಮ್ಮ ಅವರನ್ನು ಜನವರಿ 5ರಂದು ಶೃಂಗವರಪುಕೋಟಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ಮನೆಗೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿಲ್ಲ ಮತ್ತು ರಸ್ತೆ ವ್ಯವಸ್ಥೆ ಇರಲಿಲ್ಲ. ದಿಕ್ಕುತೋಚದೆ ಗಂಗುಲು ತನ್ನ ಸ್ನೇಹಿತನ ಸಹಾಯದಿಂದ ಆಸ್ಪತ್ರೆಯಿಂದ ದ್ವಿಚಕ್ರ ವಾಹನದಲ್ಲಿ ಪತ್ನಿಯ ಮೃತದೇಹವನ್ನು ಸಾಗಿಸಿದ್ದಾನೆ.

Related Articles

Back to top button