ರಾಜಕೀಯ
ರಷ್ಯಾದಲ್ಲಿ ಆಂತರಿಕ ಯುದ್ಧ :ಪುಟಿನ್ ವಿರುದ್ಧ ಸಿಡಿದೆದ್ದ ಮಾಜಿ ಆಪ್ತ ವ್ಯಾಗ್ನರ್ ಪಡೆ

Views: 0
ರಷ್ಯಾ ಅಧ್ಯಕ್ಷ ಪುಟಿನ್ ರವರ ಬೆಂಬಲದಿಂದ ಆರಂಭವಾಗಿದ್ದ ಎಪ್ಲೇನಿ ಫ್ರೀ ಗೋಜಿನ್ ನೇತೃತ್ವದಲ್ಲಿ ವ್ಯಾಗ್ನರ್ ಮರ್ಸೇನರಿ ಎಂಬ ಖಾಸಗಿ ಮಿಲಿಟರಿ ಪಡೆಯು ಪುತಿನ್ ವಿರುದ್ಧ ತಿರುಗಿ ಬಿದ್ದಿದೆ.
ರಷ್ಯಾದ ಎರಡು ನಗರವನ್ನು ವಶಪಡಿಸಿಕೊಂಡಿರುವುದಾಗಿ ಮತ್ತು ಮೂರು ಮಿಲಿಟರಿ ಹೆಲಿಕಾಪ್ಟರ್ ಗಳನ್ನು ಹೊಡೆದು ಉರುಳಿಸಿರುವುದಾಗಿ ಹೇಳಿಕೊಂಡಿದೆ.
ಪುಟಿನ್ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ವ್ಯಾಗ್ನರ್ ಸೈನಿಕರ ಶಸ್ತ್ರಸಜ್ಜಿತ ದಂಗೆಯು ಬೆನ್ನಿಗೆ ಚೂರಿ ಇರಿತವಾಗಿದೆ ಮತ್ತು ಪ್ರಿಗೋಜಿನ್ ರಷ್ಯಾಕ್ಕೆ ದ್ರೋಹ ಮಾಡಿದ್ದಾರೆ ಇದರಲ್ಲಿ ಭಾಗಿಯಾದವರು ತಕ್ಕ ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.
ದೇಶವು ಶೀಘ್ರದಲ್ಲಿ ಹೊಸ ಪ್ರಧಾನಿಯನ್ನು ಹೊಂದಲಿದೆ ಎಂದು ವ್ಯಾಗ್ನರ್ ಪಡೆ ಹೇಳಿದೆ.
ಇನ್ನೊಂದಡೆ ಜನತೆ ತನ್ನ ಪರ ನಿಲ್ಲುವಂತೆ ಮನವಿ ಮಾಡಿರುವ ಪುಟಿನ್ ವ್ಯಾಗ್ನರ್ ದಾಳಿಯನ್ನು ಹಿಮ್ಮೆಟ್ಟಿಸಲು ತಮ್ಮ ಸೇನೆ ಸುಸಜ್ಜಿತವಾಗಿದೆ ಎಂದು ಹೇಳಿಕೊಂಡಿದ್ದಾರೆ.