ರಘುರಾಮಂ -ಯಕ್ಷಕವಿ ವಂದನಂ, ಅಭಿನಂದನಾ ಕಾರ್ಯಕ್ರಮ

Views: 0
ಕುಂದಾಪುರ : ಕಾವ್ಯಾತ್ಮಕವಾಗಿ ಛಂದೋಬದ್ಧ ಕೃತಿಗಳ ಮೂಲಕ ಸಮಾಜಕ್ಕೆ ಸಂಸ್ಕಾರಯುತವಾದ ಸಂದೇಶ ಮೂಡಿಸಿದವರು ಕಂದಾವರ ರಘುರಾಮ ಶೆಟ್ಟಿ ಎಂದು ಮಣಿಪಾಲ ಎಂ.ಐ.ಟಿ ಕಾಲೇಜಿನ ಉಪನ್ಯಾಸಕ ಎಸ್. ವಿ. ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ರಘುರಾಮಂ ಯಕ್ಷಕವಿ ವಂದನಂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೆಡೂ೯ರು ಮೇಳದ ಯಜಮಾನ ವೈ. ಕರುಣಾಕರ ಶೆಟ್ಟಿ ಅವರನ್ನು ಸನ್ಮಾನಿಸಿ ಮಾತನಾಡಿ, ಕಥೆಗಳ ಹೂರಣವನ್ನು ಹೆಣೆದು ಯಕ್ಷ ಕಾವ್ಯ ಪ್ರಪಂಚದಲ್ಲಿ ಸದ್ದಿಲ್ಲದೆ ಹೆಸರು ಮಾಡಿ, ಇಂದಿಗೂ ಜನಮನದಲ್ಲಿ ಉಳಿದು, ಯಕ್ಷರಂಗದಲ್ಲಿ ಮೆರೆದಿದ್ದಾರೆ ಎಂದರು.
ಸಭೆಯಲ್ಲಿ ಸಂಕಾಪುರ ಶಿವರಾಮ ಶೆಟ್ಟಿ, ಯಕ್ಷ ಕಲಾವಿದ ಎಂ. ಕೆ ರಮೇಶ್ ಆಚಾರ್ಯ, ದಾಂಡೇಲಿ ಪ್ರಕಾಶ್ ಶೆಟ್ಟಿ, ಬೆಳ್ವೆ ಶ್ರೀನಿವಾಸ ಆಚಾರ್ಯ ಇನ್ನಿತರರು ಇದ್ದರು.
ಪ್ರಸಂಗಕತ೯ ಪ್ರಸಾದ ಕುಮಾರ ಮೊಗೆಬೆಟ್ಟು ಸನ್ಮಾನ ಪತ್ರ ವಾಚಿಸಿದರು. ಸತೀಶ್ ಶೆಟ್ಟಿ ಮೂಡುಬಗೆ ನಿರೂಪಿಸಿ, ವಂದಿಸಿದರು. ನಂತರ ಶಂಕರ ನಾರಾಯಣ ಸುರೇಶ್ ಶೆಟ್ಟಿ ನೇತ್ರತ್ವದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ- ಗಾನ- ವೈಭವ ನಡೆಯಿತು.