ಸಾಮಾಜಿಕ

ಮ್ಯಾಟ್ರಿಮೋನಿ ತಾಣದಲ್ಲಿ ಪರಿಚಯವಾದ ವ್ಯಕ್ತಿ ಮದುವೆಯಾಗುವುದಾಗಿ ನಂಬಿಸಿ, ಮಹಿಳಾ ಕಾನ್ಸ್ಟೇಬಲ್ ಗೆ 18.ಲಕ್ಷ ರೂ. ವಂಚನೆ

Views: 77

ಕನ್ನಡ ಕರಾವಳಿ ಸುದ್ದಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಕಾನ್ಸ್ಟೇಬಲ್ ಮಹಿಳೆಯೊಬ್ಬರು ಮ್ಯಾಟ್ರಿಮೋನಿ ತಾಣದಲ್ಲಿ ಪರಿಚಯವಾದ ವ್ಯಕ್ತಿಯಿಂದ 18 ಲಕ್ಷ ರೂ. ವಂಚನೆಗೆ  ಒಳಗಾಗಿದ್ದಾರೆ.

ಮ್ಯಾಟ್ರಿಮೋನಿ ತಾಣಗಳಲ್ಲಿ ಜೀವನ ಸಂಗಾತಿಯನ್ನು ಹುಡುಕುತ್ತಿರುವಾಗ ಅಶೋಕ್ ಮುಸ್ತಿ ಎಂಬಾತ ಪರಿಚಯವಾಗಿದ್ದಾನೆ. ತೆಲಂಗಾಣ ಮೂಲದವನಾದ ಆತ, ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ಮಾಡುತ್ತಿದ್ದೇನೆ ಎಂದು ನಂಬಿಸಿ, ಮದುವೆ ಮಾತುಕತೆ ಮುಗಿಸಿ ವಂಚನೆ ಎಸಗಿದ್ದಾನೆ.

ಮದುವೆಯಾಗುವ ನೆಪದಲ್ಲಿ ಆಗಾಗ ಮನೆಗೂ ಬರುತ್ತಿದ್ದ ಆರೋಪಿ, ಮದುವೆಗಾಗಿ ವರದಕ್ಷಿಣೆ ಹಣವಾಗಿ 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಮೋಸದ ಜಾಲದ ಅರಿವಾಗದ ಸಂತ್ರಸ್ತೆ ಯುವಕ ಹೇಳಿದ ಬ್ಯಾಂಕ್ ಖಾತೆಗೆ 18 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ.

ಆ ನಂತರ ಆತ ಒಂದಲ್ಲ ಒಂದು ರೀತಿಯಲ್ಲಿ ತಡಮಾಡಿ, ನಂತರ ಮದುವೆ ನಿರಾಕರಿಸಿದ್ದ. ಈ ಬಗ್ಗೆ ಸಂತ್ರಸ್ತೆ ಅಳಲುತೋಡಿಕೊಂಡಿದ್ದು, ನನ್ನ ಹಣವನ್ನೂ ವಾಪಸ್ ಕೊಡದೇ, ಮೊಬೈಲ್ ಕರೆ ಸ್ವೀಕರಿಸದೆ ನನ್ನನ್ನು ಮೋಸ ಮಾಡಿದ್ದಾನೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇಂತಹ ಮೋಸಗಳು ಆಗಾಗ್ಗೆ ನಡೆದು ಅಮಾಯಕ ಯುವಕ ಯುವತಿಯರು ಒಂದಲ್ಲ ರೀತಿಯಲ್ಲಿ ಬಲಿಯಾಗುತ್ತಿದ್ದಾರೆ. ಮ್ಯಾಟ್ರಿಮೋನಿ ತಾಣಗಳಲ್ಲಿ ಪರಿಚಯವಾಗುವವರ ಜತೆ ಗೆಳೆತನ, ಹಣಕಾಸು ವ್ಯವಹಾರಗಳನ್ನು ನಡೆಸುವ ಮುನ್ನ ಹೆಚ್ಚಿನ ಎಚ್ಚರ ವಹಿಸುವುದು ಒಳಿತು

 

 

|

Related Articles

Back to top button