ಸಾಮಾಜಿಕ
ಮೇ. 3 ಕ್ಕೆ : ಉಚಿತ ಸಾಮೂಹಿಕ ವಿವಾಹ

Views: 1
ಕುಂದಾಪುರ : ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಉಡುಪಿ ಜಿಲ್ಲಾ ಮೊಗ ವೀರ ಯುವ ಸಂಘಟನೆಯ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹವು ಗೋಧೂಳಿ ಲಗ್ನ ಮಹೂತ೯ದಲ್ಲಿ ಮೇ. 3 ರಂದು ಸಂಜೆ 6-50 ಕ್ಕೆ ಕುಂದಾಪುರ ಮೊಗವೀರ ಸಭಾ ಭವನದಲ್ಲಿ ನಡೆಯಲಿದೆ.
ವಧುವಿಗೆ ಕಾಲುಂಗುರ, ಸೀರೆ, ರವಕೆ ಕಣ, ವರನಿಗೆ ಕುತಾ೯, ಪೈಜಾಮು ಸೇರಿದಂತೆ ಉಡುಗೊರೆಯನ್ನು ಸಂಘದ ವತಿಯಿಂದ ನೀಡಲಾಗಿದೆ. ಸತತ 14 ನೇ ಉಚಿತ ಸಾಮೂಹಿಕ ವಿವಾಹ ವಾಗಿದ್ದು, 20 ಜೋಡಿಗಳ ಉಚಿತ ಸಾಮೂಹಿಕ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.