ಇತರೆ

ಮೇಲುಕೋಟೆ ರೀಲ್ಸ್ ಟೀಚರ್ ಕೊಲೆ ಮಾಡಿ ಹೂತಿಟ್ಟಿದ್ದ ಆರೋಪಿ ಹೊಸಪೇಟೆಯಲ್ಲಿ ಸೆರೆ 

Views: 184

ಮಂಡ್ಯ: ಮೇಲುಕೋಟೆ ಖಾಸಗಿ ಶಾಲಾ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣದಲ್ಲಿ ಪೊಲೀಸರು ಸ್ಫೋಟಕ ಸಂಗತಿಗಳನ್ನು ಕಲೆ ಹಾಕಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಶವ ಸಿಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ಹಂತಕ ನಿತೀಶ್ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಮೇಲುಕೋಟೆ ಬೆಟ್ಟದಲ್ಲಿ ಶಿಕ್ಷಕಿ ದೀಪಿಕಾರನ್ನು ಕೊಲೆ ಮಾಡಿದ್ದ ಆರೋಪಿ ನಿತೀಶ್ ಎರಡು ದಿನ ಗ್ರಾಮದಲ್ಲೇ ಇದ್ದಾನೆ. ಕೊಲೆಯಾದ ಮಾರನೇ ದಿನ ದೀಪಿಕಾಳ ತಂದೆಗೆ ತಾನೇ ಕರೆ ಮಾಡಿದ್ದ ನಿತೀಶ್, ಅಪ್ಪಾಜಿ ದೀಪಿಕಾ ಅಕ್ಕಾ ಸಿಕ್ಕಿದ್ರಾ ಎಂದು ವಿಚಾರಿಸಿದ್ದಾನೆ. ಮೃತ ದೀಪಿಕಾಳನ್ನ ಅಕ್ಕ ಅಂತ ಕರೆದ್ರೆ ಆಕೆಯ ತಂದೆಯನ್ನು ಅಪ್ಪಾಜಿ ಎಂದು ಆರೋಪಿ ನಿತೀಶ್ ಕರೆಯುತ್ತಿದ್ದ. ತನ್ನ ಮೇಲೆ ಅನುಮಾನ ಬಾರದಂತೆ ದೀಪಿಕಾಳ ಬಗ್ಗೆ ನಿತೀಶ್ ವಿಚಾರಿಸುವ ನಾಟಕವಾಡಿದ್ದಾನೆ.

ಬೆಟ್ಟದ ತಪ್ಪಲಿನಲ್ಲಿ ಹೂತಿಟ್ಟಿದ್ದರಿಂದ ಶವ ಯಾರಿಗೂ ಸಿಗೋದಿಲ್ಲ ಎಂದು ಆರೋಪಿ ಅಂದುಕೊಂಡಿದ್ದ. ಆದರೆ ಎರಡು ದಿನದ ಬಳಿಕ ದೀಪಿಕಾ ಶವ ಪತ್ತೆಯಾಗ್ತಿದ್ದಂತೆ ನಿತೀಶ್‌ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಕಾಲ್ಕಿತ್ತಿದ್ದಾನೆ. ಇವನ ಜಾಡು ಹಿಡಿದು ಹೊರಟ ಪೊಲೀಸರು ಹೊಸಪೇಟೆಯಲ್ಲಿ ಆರೋಪಿಯನ್ನು ಬಂಧಿಸಿ ಮೇಲುಕೋಟೆ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಪೊಲೀಸರಿಗೆ ಸಿಕ್ಕಿಬಿದ್ದಾಗ ತಾನೇನು ಮಾಡಿಲ್ಲ. ನನಗೇನು ಗೊತ್ತೇ ಇಲ್ಲ ಎಂದಿದ್ದ ಆರೋಪಿ ನಿತೀಶ್, ಪೊಲೀಸರ ವಿಚಾರಣೆಯಲ್ಲಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣದ ದಿಕ್ಕು ತಪ್ಪಿಸಲು ನಾಟಕವಾಡಿದ್ದ ಕಿರಾತಕ ಈಗ ಮೇಲುಕೋಟೆ ಪೊಲೀಸರ ಅತಿಥಿಯಾಗಿದ್ದಾನೆ.

Related Articles

Back to top button
error: Content is protected !!