ಇತರೆ

ಮಹಿಳೆಯರನ್ನು ಚುಡಾಯಿಸಿದವನಿಗೆ ಊರವರು ಹಿಡಿದು ಕಂಬಕ್ಕೆ ಕಟ್ಟಿ ಬಿತ್ತು ಧರ್ಮದೇಟು.‌.‌!

Views: 79

ಕೊಪ್ಪಳ: ಮಹಿಳೆಯರನ್ನು ಚುಡಾಯಿಸಿದವನಿಗೆ ಧರ್ಮದೇಟು ನೀಡಿದ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದಿದೆ. ಕನಕಗಿರಿಯ ವಾರ್ಡ್ 5 ರಲ್ಲಿ ವಾಸಿಸುತ್ತಿದ್ದ ಯುವಕನಿಗೆ ಜನರು ಸರಿಯಾಗಿ ಥಳಿಸಿದ್ದಾರೆ.

ಯುವಕ ಮೇಲೆ ಮಹಿಳೆಯರಿಗೆ ಚುಡಾಯಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿತ್ತು. ಹಲವು ದಿನಗಳಿಂದ ಯುವಕನ ಕಿರಿಕಿರಿಗೆ ಮಹಿಳೆಯರು ಬೇಸತ್ತಿದ್ದರು ಮತ್ತು ಆತನನ್ನು ಕಾಯುತ್ತಿದ್ದರು.

ಕೊನೆಗೂ ಊರಿನವರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ದೊಣ್ಣೆಯಿಂದ ಥಳಿಸಲಾಗಿದೆ. ಥಳಿಸಿರುವ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ವೈರಲ್ ಆಗಿದೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button