ಜನಮನ

ಮರವಂತೆ: ಈಜಲು ತೆರಳಿದ ಯುವಕ ಸಮುದ್ರ ಪಾಲು

Views: 0

ಕುಂದಾಪುರ :ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮರವಂತೆ ಬೀಚ್ ನಲ್ಲಿ ಈಜಲು ತೆರಳಿದ ಯುವಕ ನೀರು ಪಾಲಾದ ಘಟನೆ ಜುಲೈ 18 ರಂದು ನಡೆದಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕು ಮೇವಂಡಿ ಗ್ರಾಮದ ಯುವಕ ಫೀರ್ ಸದಾಸ್ ನೀರು ಪಾಲಾದ ಯುವಕ ಎಂದು ಗುರುತಿಸಲಾಗಿದೆ.

ವಿಪರೀತ  ಸಮುದ್ರದ ಅಲೆ, ತೂಫಾನ್ ಬಗ್ಗೆ ಸ್ಥಳೀಯರು ಎಚ್ಚರಿಸಿದರೂ   ಕ್ಯಾರೇ ಮಾಡದ     ಗದಗದಿಂದ ಬಂದ ಮೂವರು ನಿನ್ನೆ ಮಧ್ಯಾಹ್ನ ಮರವಂತೆ ಬೀಚ್ ನಲ್ಲಿ ಈಜಲು ತೆರಳಿದ್ದರು.

ಅಲೆಯ ಅಬ್ಬರಕ್ಕೆ ಯುವಕನೋರ್ವ ಕೊಚ್ಚಿಕೊಂಡು ಹೋಗಿದ್ದಾನೆ. ಬಳಿಕ ಸ್ಥಳೀಯರು ಮತ್ತು ಸಮಾಜ ಸೇವಕ ಇಬ್ರಾಹಿಂ ಗಂಗೊಳ್ಳಿ ಹಾಗೂ ತಂಡದವರು, ಜೀವ ರಕ್ಷಕ ಈಜುತಜ್ಞ ದಿನೇಶ್ ಕಾರ್ವಿ ಮತ್ತು ತಂಡ ,ಅಗ್ನಿಶಾಮಕ ದಳ,  ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು , ಪೋಲೀಸರು ಹುಡುಕಾಟದ ಪ್ರಯತ್ನ ನಡೆಸಿದ್ದು ಇಂದು ಯುವಕನ ಮೃತದೇಹ ಪತ್ತೆಯಾಗಿದೆ.

Related Articles

Back to top button