ಶಿಕ್ಷಣ

ಮದ್ಯಪಾನ ಮಾಡಿ ಬಂದು ಶಾಲೆಯ ಬಾಗಿಲ ಮುಂದೆಯೇ ನಿದ್ದೆಗೆ ಜಾರಿದ ಮುಖ್ಯ ಶಿಕ್ಷಕ! 

Views: 126

ಕನ್ನಡ ಕರಾವಳಿ ಸುದ್ದಿ: ಸರಕಾರಿ ಶಾಲೆಯ ಮುಖ್ಯ ಶಿಕ್ಷಕನೊರ್ವ ಮದ್ಯಪಾನ ಮಾಡಿ, ಶಾಲೆಯ ಬಾಗಿಲ ಮುಂದೆಯೇ ನಿದ್ದೆಗೆ ಜಾರಿದ ಘಟನೆ ರಾಯಚೂರು ಮಸ್ಕಿ ತಾಲ್ಲೂಕಿನ ಗೋನಾಳ ಗ್ರಾಮದ ಅಂಬಾದೇವಿ ನಗರದಲ್ಲಿ ನಡೆದಿದೆ.

ಶಿಕ್ಷಕನನನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ನಿಂಗಪ್ಪ ಎಂದು ಗುರುತಿಸಲಾಗಿದ್ದು, ಈ ಶಿಕ್ಷಕನು ಈ ಹಿಂದೆಯೂ ಕೂಡ ಅನೇಕ ಬಾರಿ ಮದ್ಯಪಾನ ಮಾಡಿ ಶಾಲೆಗೆ ಬಂದಿದ್ದನು ಎಂದು ತಿಳಿದು ಬಂದಿದೆ.

ಶಾಲೆಯ ತರಗತಿ ವೇಳೆಯಲ್ಲಿ ಮುಖ್ಯ ಶಿಕ್ಷಕನ ಈ ನಡುವಳಿಕೆಗೆ ಪೋಷಕರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕನನ್ನು ಅಮಾನತುಗೊಳಿಸಿ, ಕ್ರಮ ತೆಗೆದುಕೊಳ್ಳಬೇಕು ಎಂದು ಪೋಷಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related Articles

Back to top button