ಸಾಮಾಜಿಕ

ಮದುವೆ ಮಂಟಪದಲ್ಲಿ ಮಾವ ಅಳಿಯನಿಗೆ 11 ಲಕ್ಷ ರೂ.ನಗದು ಉಡುಗೊರೆ ನೀಡುತ್ತಿದ್ದಂತೆ…ವರ ಮಾಡಿದ್ದೇನು?..‌

Views: 193

ಮದುವೆ ಅಂದ್ರೆ ಅಲ್ಲಿ ಸಾಕಷ್ಟು ಹಣ ಬೇಕು ಎಂಬ ಮಾತಿದೆ. ಕೆಲವು ಕಡೆ ವರದಕ್ಷಿಣೆಗಾಗಿ ಮದುವೆಗಳು ನಿಂತಿರುವ ಉದಾಹರಣೆಗಳು ನಮ್ಮ ಮುಂದಿವೆ.  ನಗ, ನಾಣ್ಯ, ವಸ್ತು, ಆಸ್ತಿಗಳ ರೂಪದಲ್ಲಿ ವಧುವಿನಿಂದ ವರ ಪಡೆಯುವ ಸಂಪತ್ತು (ಡೌರಿ). ಭಾರತೀಯ ಸಮಾಜಗಳಲ್ಲಿ ವಿವಾಹ ಒಂದು ಪವಿತ್ರವಾದ ಕಾರ್ಯ. ಗಂಡು-ಹೆಣ್ಣು ಹಾಗೂ ಅವರ ಕುಟುಂಬಗಳ ನಡುವೆ ಅನುಬಂಧವನ್ನು ಕಲ್ಪಿಸುವ ವ್ಯವಸ್ಥೆ. ಈ ವಿವಾಹಕ್ಕೆ ಸಂಬಂಧಪಟ್ಟಂತೆ ಭಾರತಕ್ಕೆ ವಿಶಿಷ್ಟವಾಗಿರುವ ಪದ್ಧತಿ ವರದಕ್ಷಿಣೆ. ವಿವಾಹದ ಸಮಯದಲ್ಲಿ ವಧುವಿನ ಕಡೆಯವರು ವರ ಅಥವಾ ಅವನ ಪಾಲಕರಿಗೆ ಕೊಡುವ ಅಥವಾ ವಿವಾಹ ಸಮಯದಲ್ಲಿ ಹುಡುಗಿ ಗಂಡನ ಮನೆಗೆ ತರುವ ಹಣ, ಒಡವೆ, ಭೂಮಿ, ಮನೆ, ನಿವೇಶನ ಮತ್ತು ಇತರ ಆಸ್ತಿಗಳನ್ನು ವರದಕ್ಷಿಣೆ ಎನ್ನಲಾಗಿದೆ. ಇದು ಹುಡುಗಿಯ ಕಡೆಯವರು ಸ್ವಇಚ್ಛೆಯಿಂದ ನೀಡಿದ್ದಾಗಿರಬಹುದು ಅಥವಾ ಹುಡುಗನ ಬಂಧುಗಳು ಬೇಡಿಕೆಯ ಮೂಲಕ ಪಡೆದುದಾಗಿರಬಹುದು.

ಮದುವೆ ಸಂದರ್ಭದಲ್ಲಿ ವರದಕ್ಷಿಣೆ ನೀಡುವ ಪದ್ಧತಿ ಬಹಳ ದಿನದಿಂದಲೂ ಚಾಲ್ತಿಯಲ್ಲಿದೆ. ಸದ್ಯ ವರದಕ್ಷಿಣೆ ಕೇಳುವವರ ಪ್ರಮಾಣ ಕಡಿಮೆಯಾಗಿದ್ದರೂ, ಆದರೆ ಪೋಷಕರು ತಮ್ಮ ಮಗಳು ಚೆನ್ನಾಗಿರಲಿ ತಮ್ಮಆರ್ಥಿಕ ಶಕ್ತಿಗೂ ಮೀರಿ ಮದುವೆ ಮಾಡಿಕೊಡುತ್ತಾರೆ.

ಇಂದು ಸಹ ಅನೇಕ ಕಡೆ ವರದಕ್ಷಿಣೆ ಕೇಸ್​ಗಳು ದಾಖಲಾಗುತ್ತಿರುತ್ತವೆ. ಮದುವೆಯಲ್ಲಿ ವರದಕ್ಷಿಣೆ ಕೇಳುವುದು ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ. ಆದರೂ ಹಣದ ರೂಪ ಬಿಟ್ಟು ವರನಿಗೆ ಬೇಕಾಗಿರುವ ಪ್ಯಾಂಟ್, ಶರ್ಟ್, ಶೂಟ್,ಕಾರು ಮುಂತಾದ ಗೃಹೋಪಯೋಗಿ ವಸ್ತುಗಳ ರೂಪದಲ್ಲಿ ನೀಡುತ್ತಿದ್ದಾರೆ.

ಮದುವೆಯಾದ ನಂತರವೂ ವರದಕ್ಷಿಣೆಗಾಗಿ ಕಿರುಕುಳ ನೀಡುವ ನೀಚ ಮನಸ್ಥಿತಿಗಳು ಸಮಾಜದಲ್ಲಿ ಇನ್ನೂ ಉಳಿದಿದೆ.

ಇತ್ತೀಚೆಗಷ್ಟೇ ರಾಜಸ್ಥಾನದ ಜಲೋರ್‌ನ ವರನೊಬ್ಬ ಮದುವೆ ಮಂಟಪದಲ್ಲಿ  ನಡೆದುಕೊಂಡ ರೀತಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಭಾರತದ ಹಲವು ರಾಜ್ಯಗಳಲ್ಲಿ ಮದುವೆಯ ಹಂತದಲ್ಲಿ ವರದಕ್ಷಿಣೆ ಕೇಳುವ ಪದ್ಧತಿ ಇನ್ನೂ ಜೀವಂತವಾಗಿದೆ. ವರದಕ್ಷಿಣೆ ಕೊಡುವ ಮತ್ತು ಪಡೆಯುವ ಪದ್ಧತಿ ಇನ್ನೂ ಅನೇಕ ಕಡೆಗಳಲ್ಲಿ ಆಚರಣೆಯಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಮಗಳ ಮದುವೆಗಾಗಿ ಕುಟುಂಬಸ್ಥರು ಜೀವನದ ಉಳಿತಾಯವನ್ನು ಖರ್ಚು ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಸಾಲವನ್ನೂ ಸಹ ಮಾಡಿಕೊಳ್ಳುತ್ತಾರೆ. ಇದೆಲ್ಲದರ ಉದ್ದೇಶ ಮಗಳು ಗಂಡನ ಮನೆಯಲ್ಲಿ ಸುಖವಾಗಿ ಇರುತ್ತಾಳೆ ಎಂಬುವುದು ಆಗಿರುತ್ತದೆ.

ಬಿಕಾನೇರ್‌ನ ಹುಕುಮ್ ಸಿಂಗ್ ಸೋಧಾ ಕೂಡ ಮಗಳು ಚೆನ್ನಾಗಿರಲಿ ಎಂದು ವರೋಪಚಾರದ ಭಾಗವಾಗಿ ದೊಡ್ಡ ಪ್ರಮಾಣದ ಮೊತ್ತ ನೀಡಲು ಹೋಗಿದ್ದರು. ಈ ವೇಳೆ ವರ ಮಾಡಿದ್ದನ್ನು ಕಂಡು ವಧುವಿನ ತಂದೆಗೆ ನಂಬಗಾಲಿಲ್ಲ. ಈ ವೇಳೆ ವಧುವಿನ ತಂದೆ ಭಾವುಕರಾಗಿದ್ದರು.

ಸಾಂಗ್ಡೋಯಾ ನಿವಾಸಿಯಾದ ಡಾಕ್ಟರ್ ಪರ್ಬತ್ ಸಿಂಗ್ ಅವರ ಪುತ್ರನ ಮದುವೆ ನಿಲುಕಮ್ ಸಿಂಗ್ ಎಂಬವರ ಪುತ್ರಿ ಜೊತೆ ನಿಶ್ಚಯವಾಗಿತ್ತು. ವರೋಪಚಾರದ ಶಾಸ್ತ್ರದ ವೇಳೆ ವಧುವಿನ ತಂದೆ 11 ಲಕ್ಷದ 21 ಸಾವಿರ ರೂಪಾಯಿ ನಗದನ್ನು ಉಡುಗೊರೆಯಾಗಿ ನೀಡಿದ್ದರು.

ಮಾವ 11.21 ಲಕ್ಷ ರೂಪಾಯಿ ನಗದನ್ನು ಉಡುಗೊರೆಯಾಗಿ ನೀಡುತ್ತಿದ್ದಂತೆ ಅಲ್ಲಿಯ ನಡೆದಿದ್ದು ಬೇರೆಯಾಗಿತ್ತು. ಮುಂದಿನ ಘಟನೆಯನ್ನು ಅಲ್ಲಿಗೆ ಬಂದವರು ಊಹೆಯೂ ಮಾಡಿರಲಿಲ್ಲ.

ನಗದು ಉಡುಗೊರೆಯನ್ನು ವರ ಹಿಂದಿರುಗಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ವರ ನಗದು ಪಡೆಯಲು ಹಿಂದೆ ಸರಿದ ನಿರ್ಧಾರವನ್ನು ಆತನ ತಂದೆಯೂ ಸಹ ಬೆಂಬಲಿಸಿದ್ದಾರೆ.

 

 

Related Articles

Back to top button