ಸಾಮಾಜಿಕ

ಮದುವೆಯಾದ ಎರಡೇ ತಿಂಗಳಿಗೆ ಪತ್ನಿ ಬಿಟ್ಟು 55 ವರ್ಷದ ಅತ್ತೆ ಜತೆ 25ರ ಅಳಿಯನ ಜತೆ ಎಸ್ಕೇಪ್‌!

Views: 212

ಕನ್ನಡ ಕರಾವಳಿ ಸುದ್ದಿ: ಮದುವೆಯಾದ ಎರಡೇ ತಿಂಗಳಿಗೆ ಪತ್ನಿಯನ್ನು ಬಿಟ್ಟು ಅತ್ತೆ ಜತೆ ಅಳಿಯ ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಮಗಳಿಗೆ ಮದುವೆ ಮಾಡಿಕೊಟ್ಟ 15 ದಿನಕ್ಕೆ 25ರ ಅಳಿಯನ ಜತೆ 55 ವರ್ಷದ ಅತ್ತೆ ಅಕ್ರಮ ಸಂಬಂಧ ಬಯಲಾಗಿದೆ. ಹೀಗಾಗಿ ಅತ್ತೆಯೊಂದಿಗೆ ಅಳಿಯ ಪರಾರಿಯಾಗಿದ್ದು, ಪತ್ನಿ ಪೊಲೀಸ್‌ ಠಾಣೆಯಲ್ಲಿ ಕಣ್ಣೀರಿಟ್ಟಿದ್ದಾಳೆ. ಶಾಂತಾ (55) ಎಂಬ ಮಹಿಳೆ ಜತೆ ಗಣೇಶ್‌ (25) ಎಸ್ಕೇಪ್‌ ಆಗಿದ್ದಾನೆ.

ಗಣೇಶ್‌ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದವನು. ಮೇ 2ರಂದು ಚನ್ನಗಿರಿ ಬಸ್ ನಿಲ್ದಾಣದಲ್ಲಿ ಪತ್ನಿಯನ್ನು ಬಿಟ್ಟು ಅತ್ತೆಯ ಜತೆ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ನಿವಾಸಿ ಶಾಂತಾ ಎಂಬ ಮಹಿಳೆ 13 ವರ್ಷಗಳ ಹಿಂದೆ ನಾಗರಾಜ್ ಎಂಬಾತನನ್ನು 2ನೇ ಮದುವೆ ಆಗಿದ್ದಳು. ನಾಗರಾಜ್ ಮೊದಲ ಹೆಂಡತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಅವರಲ್ಲಿ ಒಬ್ಬಳಿಗೆ ಮದುವೆ ಮಾಡಿದ್ದಾರೆ. ಮಲತಾಯಿ ಶಾಂತಾಳೇ ಹುಡುಗನನ್ನು ಹುಡುಕಿ ಮದುವೆ ಮಾಡಿದ್ದಳು. ಬೇಡ ಎಂದರೂ ಬಿಡದೆ ಅದೇ ಹುಡುಗನ ಜತೆ ಮದುವೆ ಮಾಡಿಸಿದ್ದಳು.

ಆ ಹುಡುಗ ಬೇಡ, ನಾನು ಓದಲು ಹಾಸ್ಟೆಲ್ಗೆ ಹೋಗುವೆ ಎಂದರೂ ಬಿಡದ ಶಾಂತಾ, ಮಲ ಮಗಳನ್ನು ಒಪ್ಪಿಸಿ ಗಣೇಶ್ ಎಂಬ ಯುವಕನ ಜತೆ ಮದುವೆ ಮಾಡಿಸಿದ್ದಳು ಎನ್ನಲಾಗಿದೆ. ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ಗಣೇಶ್ ಜತೆ ನಾಗರಾಜ್ ಮಗಳು ಹೇಮಾ ಮದುವೆ ಅದ್ಧೂರಿಯಾಗಿಯೇ ನಡೆದಿತ್ತು.

ಮದುವೆಯಾದ 15 ದಿನಕ್ಕೆ ಅಳಿಯನ ಜತೆ ಅತ್ತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗುತ್ತಿದೆ. ಮೊಬೈಲ್‌ನಲ್ಲಿ ಅಶ್ಲೀಲ ಮೆಸೇಜ್, ಫೋಟೋ ನೋಡಿ ಮಗಳು ಶಾಕ್ ಆಗಿದ್ದಾಳೆ. ಗಂಡ ಹಾಗೂ ಮಲತಾಯಿಯ ಸರಸ ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ. ಇವರ ಅಕ್ರಮ ಸಂಬಂಧ ಬೆಳಕಿಗೆ ಬರುತ್ತಿದ್ದಂತೆ ಹಣ, ಆಭರಣ ಕದ್ದು ಅತ್ತೆ ಹಾಗೂ ಅಳಿಯ ಇಬ್ಬರೂ ಎಸ್ಕೇಪ್ ಆಗಿದ್ದಾರೆ.

ಗಣೇಶ್ ಹೆಂಡತಿ ಹೇಮಾಳನ್ನು ಚನ್ನಗಿರಿ ಬಸ್ ಸ್ಟಾಪ್‌ನಲ್ಲಿ ಬಿಟ್ಟು ಅತ್ತೆ ಜತೆ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button