ಶಿಕ್ಷಣ

ಮದರ್ ತೆರೇಸಾಸ್ ಪಿಯು ಕಾಲೇಜಿಗೆ ರಾಜ್ಯಮಟ್ಟದಲ್ಲಿ 2 ರ‍್ಯಾಂಕ್‌

Views: 387

ಕನ್ನಡ ಕರಾವಳಿ ಸುದ್ದಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶಂಕರನಾರಾಯಣದ ಮದರ್ ತೆರೇಸಾ’ಸ್ ಪಿ ಯು ಕಾಲೇಜಿಗೆ ರಾಜ್ಯಮಟ್ಟದಲ್ಲಿ 2 ರ‍್ಯಾಂಕ್‌ ಪಡೆದುಕೊಂಡಿದೆ.

ಕುಮಾರಿ ಅಕ್ಷಿತಾ 590 (ಶೇ 98.3 ) (ಗಣಿತ-100)ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 9ನೇ ರ‍್ಯಾಂಕ್‌ ಪಡೆದು ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಕುಮಾರಿ ನಿಶಾ ನಾರಾಯಣ್ ತೊಳಾರ್ 593 (ಶೇ. 98.83)

(ಅರ್ಥಶಾಸ್ತ್ರ -100, ವ್ಯವಹಾರ ಅಧ್ಯಯನ -100,ಲೆಕ್ಕಶಾಸ್ತ್ರ- 100 ಸಂಖ್ಯಾಶಾಸ್ತ್ರ – 100) ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 6ನೇ ರ‍್ಯಾಂಕ್‌ ಪಡೆದು ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಅತ್ತ್ಯುತ್ತಮ ಫಲಿತಾಂಶ ದಾಖಲಿಸಿ ಕಾಲೇಜಿಗೆ ಕೀರ್ತಿತಂದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದ ಅಭಿನಂದಿಸಿರುತ್ತಾರೆ.

Related Articles

Back to top button