ಧಾರ್ಮಿಕ
ಮಣೂರು ಕೊಯ್ಕೂರು ಬೊಬ್ಬರ್ಯೇಶ್ವರ ಮತ್ತು ಪರಿವಾರ ದೈವಸ್ಥಾನದಲ್ಲಿ ಹಾಲುಹಬ್ಬ, ಗೆಂಡಸೇವೆ

Views: 23
ಕೋಟ: ಕೊಯ್ಕೂರು ಶ್ರೀ ಬೊಬ್ಬರ್ಯೇಶ್ವರ ಮತ್ತು ಪರಿವಾರ ದೈವಗಳ ಸನ್ನಿಧಿಯಲ್ಲಿ ಹಾಲುಹಬ್ಬ ಮತ್ತು ಗೆಂಡಸೇವೆ ನಾಗದೇವರಿಗೆ ಹಾಲುಹಿಟ್ಟು ಸೇವೆ ಪ್ರಯುಕ್ತ ಮಾ.1ರ ರಾತ್ರಿ 9ಕ್ಕೆ ಮಾರಿ ಪೂಜೆ, ಮಾ.3ರಂದು ಬೆಳಗ್ಗೆ 9ಕ್ಕೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ರಾತ್ರಿ 8ಕ್ಕೆ ಗೆಂಡಸೇವೆ ನಂತರ ಅನ್ನಸಂತರ್ಪಣೆ ಮಾ.4ರಂದು ಢಕ್ಕೆಬಲಿ, ತುಲಾಭಾರ ಸೇವೆ, ಹರಕೆ ಸಮರ್ಪಣೆ, ಹಣ್ಣುಕಾಯಿ ಸಮರ್ಪಣೆ ಇತ್ಯಾದಿ ಸೇವೆಗಳು ನಂತರ ಅನ್ನಸಂತರ್ಪಣೆ ಜರುಗಲಿದೆ ಎಂದು ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಸದಾಶಿವ ಶೆಟ್ಟಿ ಕೂಯ್ಕೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.