ಮಂಡ್ಯ ಟಿಕೆಟ್ ಸುಮಲತಾಗೆ ಬೇಕು ಎಂದು ಪಟ್ಟು ಹಿಡಿದ ಬಿಜೆಪಿ ನಾಯಕರು! ಜೆಡಿಎಸ್ ಶಾಕ್ !

Views: 40
ಮಂಡ್ಯ: ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಿದ್ದ ಸುಮಲತಾ ಅಂಬರೀಶ್ ಅವರ ಮುಂದಿನ ನಡೆಯೇನು ಅನ್ನೋದು ಬಹಳ ಕುತೂಹಲ ಆಗಿದೆ. ಈ ಮಧ್ಯೆ ಸುಮಲತಾ ಅಂಬರೀಶ್ ಪರ ಮಾಜಿ ಬಿಜೆಪಿ ಶಾಸಕ ಪ್ರೀತಮ್ ಗೌಡ ಬ್ಯಾಟಿಂಗ್ ಮಾಡಿದ್ದಾರೆ.
ಪಾಂಡವಪುರದಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಭಾನುವಾರ ನಡೆಸಲಾಗಿದೆ. ಮಾಜಿ ಶಾಸಕರಾದ ಪ್ರೀತಂ ಗೌಡ, ರಾಮದಾಸ್, ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ, ಸ್ಥಳೀಯ ನಾಯಕ ಸಿದ್ದರಾಮಯ್ಯ ಸೇರಿ ಹಲವು ಪ್ರಮುಖರು ಭಾಗಿಯಾಗಿದ್ದರು. ಈ ವೇಳೆ ಲೋಕಸಭೆಯಲ್ಲಿ ಪಕ್ಷದ ಕಾರ್ಯಚಟುವಟಿಕೆ ಹೇಗಿರಬೇಕು? ಒಂದು ವೇಳೆ ಬಿಜೆಪಿಗೆ ಟಿಕೆಟ್ ಸಿಕ್ಕರೆ ಯಾರಿಗೆ ಟಿಕೆಟ್ ನೀಡಬೇಕು? ಯಾರು ಯಾರು ಆಕಾಂಕ್ಷಿಗಳಿದ್ದಾರೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ಪ್ರೀತಂ ಗೌಡ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಎಲ್ಲರ ಸಂಕಲ್ಪವಾಗಿದೆ. ಜಾತ್ಯತೀತ ಜನತಾದಳಕ್ಕೆ ಸಹ ಮೋದಿ ಪ್ರಧಾನಿಯಾಗಬೇಕು ಎಂಬ ಬುದ್ಧಿ ಬಂದಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು.
ಕೆಲವೇ ವರ್ಷಗಳ ಹಿಂದೆ ದೇಶದಲ್ಲಿ ಕುಟುಂಬ ರಾಜಕಾರಣ ಇತ್ತು. ಒಂದೊಂದು ರಾಜ್ಯದಲ್ಲಿ ಒಂದೊಂದು ಕುಟುಂಬದವರು ಆಳುತ್ತಿದ್ದರು. ಈ ಕ್ಷಣದವರೆಗೂ ಕ್ಷೇತ್ರಗಳ ಹಂಚಿಕೆಯಾಗಿಲ್ಲ. ಜೆಡಿಎಸ್ ಈಗ ಎನ್‌ಡಿಎಗೆ ಬೆಂಬಲ ಕೊಟ್ಟಿದೆ. ಹಾಗಾಗಿ ಹಾಸನ ಮತ್ತು ಮಂಡ್ಯ ಕ್ಷೇತ್ರಗಳ ಕುರಿತು ಹಂಚಿಕೆಯಾಗಿಲ್ಲ. ಇಂಥವರಿಗೆ ಎಂದು ನಿಗದಿಯಾಗಿಲ್ಲ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯಾದರೂ ಆಗಬಹುದು. ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಹಾಗೊಂದು ವೇಳೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಂದರ್ಭ ಬಂದರೆ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಅವರ ಬಳಿಯೇ ಕೇಳಿ ನಿರ್ಧಾರ ಮಾಡಲಾಗುವುದು. ಈಗ ಹೊಂದಾಣಿಕೆಯಾಗಿ ಬಿಟ್ಟಿದೆ. ಹೀಗಾಗಿ ನಾವು ಏನು ಮಾಡೋದು ಎಂಬ ಬಗ್ಗೆ ಕಾರ್ಯಕರ್ತರು ಚಿಂತೆಗೊಳಗಾಗಬಾರದು ಎಂದು ಪ್ರೀತಂ ಗೌಡ ಕಿವಿ ಮಾತು ಹೇಳಿದ್ದಾರೆ.
ಜೆಡಿಎಸ್ ಎನ್‌ಡಿಎಗೆ ಬೆಂಬಲ ಕೊಟ್ಟಿದೆ. ಆದರೆ, ಹಾಸನ ಮತ್ತು ಮಂಡ್ಯ ಕ್ಷೇತ್ರಗಳ ಸೀಟು ಇನ್ನೂ ಹಂಚಿಕೆಯಾಗಿಲ್ಲ. ಮೈತ್ರಿಯ ಮೂಲ ಉದ್ದೇಶವೇ ಗೆಲುವು. ಹಾಗಾಗಿಯೇ ಗೆಲ್ಲುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಸುಮಲತಾ ಅಂಬರೀಷ್ ಅವರು ಎನ್‌ಡಿಎ ಅನ್ನು ಬೆಂಬಲಿಸಿದ್ದಾರೆ. ಅವರು ಟಿಕೆಟ್ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅಲ್ಲದೆ, ಮಾಜಿ ಸಚಿವ ನಾರಾಯಣಗೌಡ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸರ್ವೆ ಮಾಡಿ ಜನರ ಅಭಿಪ್ರಾಯದಂತೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಪ್ರೀತಂ ಗೌಡ ಹೇಳಿದರು.
ವೈಯಕ್ತಿಕವಾಗಿ ನನಗೆ ಲೋಕಸಭಾ ಚುನಾವಣೆಗೆ ಹೋಗಲು ಇಷ್ಟವಿಲ್ಲ. ನಮ್ಮ ಉದ್ದೇಶವಿರುವುದು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಅನ್ನೋದು. ಬಿಜೆಪಿ ಅಭ್ಯರ್ಥಿ ಗೆಲ್ಲಲು ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ ಎಂದು ಪ್ರೀತಂ ಗೌಡ ಹೇಳಿದರು.
ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಿದ್ದ ಸುಮಲತಾ ಅಂಬರೀಶ್ ಅವರ ಮುಂದಿನ ನಡೆಯೇನು ಅನ್ನೋದು ಬಹಳ ಕುತೂಹಲ ಆಗಿದೆ. ಈ ಮಧ್ಯೆ ಸುಮಲತಾ ಅಂಬರೀಶ್ ಪರ ಮಾಜಿ ಬಿಜೆಪಿ ಶಾಸಕ ಪ್ರೀತಮ್ ಗೌಡ ಬ್ಯಾಟಿಂಗ್ ಮಾಡಿದ್ದಾರೆ.
ಇಂದು ಮಂಡ್ಯದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆ ಬಳಿಕ ಮಾತಾಡಿದ ಪ್ರೀತಮ್ ಗೌಡ, ಗೌಡರಿಗೆ ಮಂಡ್ಯದಲ್ಲೂ, ಹಾಸನದಲ್ಲೂ ನೆಂಟರು ಇರ್ತಾರೆ. ನಮ್ಮ ಸಂಕಲ್ಪ ಕುಟುಂಬ ರಾಜಕೀಯದ ವಿರುದ್ಧ ಇರಬೇಕು. ಪ್ರತೀ ರಾಜ್ಯದಲ್ಲಿ ಒಂದೊಂದು ಕುಟುಂಬ ರಾಜಕೀಯ ಇದೆ. ಮಕ್ಕಳು ಆಯ್ತು, ಮೊಮ್ಮಕ್ಕಳು ಆಯ್ತು, ಈಗ ಮರಿ ಮಕ್ಕಳು ಬರ್ತಿದ್ದಾರೆ. ಮೋದಿ ಪ್ರಧಾನಿ ಮಾಡಲು ಜೆಡಿಎಸ್ ಕೈ ಜೋಡಿಸಿದ್ದಕ್ಕೆ ಸ್ವಾಗತ ಮಾಡುತ್ತೇನೆ ಎಂದು ಮಾತಿನಲ್ಲೆ ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟರು.
ಹಾಸನ, ಮಂಡ್ಯದಲ್ಲಿ ಗೆಲ್ಲೋ ಸಾಮರ್ಥ್ಯ ಹೊಂದಿರೋ ಅಭ್ಯರ್ಥಿಗಳು ಇದ್ದಾರೆ. ಕಾರ್ಯಕರ್ತರು ಹಾಸನ, ಮಂಡ್ಯ ಬಿಜೆಪಿಗೆ ಬೇಕು ಎಂದು ಕೇಳಿದ್ದಾರೆ. ಈ ಎರಡು ಕ್ಷೇತ್ರಗಳು ಯಾರಿಗೆ ಎಂದು ಇನ್ನೂ ಫೈನಲ್ ಆಗಿಲ್ಲ. ಮಂಡ್ಯದಲ್ಲಿ ಸುಮಲತಾ ಅವರಿಗೆ ಟಿಕೆಟ್ ಕೊಡಲಿ ಎಂಬುದು ಕಾರ್ಯಕರ್ತರ ಅಭಿಪ್ರಾಯ ಎಂದರು.