ಮಂಡ್ಯ: ಗಂಡ,ಹೆಂಡ್ತಿ ಜಗಳದಲ್ಲಿ ಪುಟ್ಟ ಕಂದಮ್ಮ ಅನಾಥ..ದಂಪತಿಯ ಸಾವಿಗೆ ಹೊಸ ಟ್ವಿಸ್ಟ್.!

Views: 208
ಮಂಡ್ಯದಲ್ಲಿ ಗಂಡ ಹೆಂಡತಿ ದುರಂತ ಅಂತ್ಯ ಕಂಡಿದ್ದಾರೆ. ಕೌಟುಂಬಿಕ ಕಲಹಕ್ಕೆ ಪತ್ನಿ ನೇಣಿಗೆ ಶರಣಾಗಿ, ಪತಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ.ಇಬ್ಬರ ಜಗಳದಲ್ಲಿ ಒಂದು ವರ್ಷದ ಹೆಣ್ಣು ಮಗು ಅನಾಥವಾಗಿದೆ.
ಮಗಳು ಚೆನ್ನಾಗಿ ಇರಬೇಕು ಅಂತಾ ಕೇಳಿದಷ್ಟು ವರದಕ್ಷಿಣೆ ಕೊಟ್ಟು ಅದ್ಧೂರಿಯಾಗಿ ಮದ್ವೆ ಮಾಡಿದ್ದಾರೆ.ಎರಡು ವರ್ಷದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಇನ್ನೂ ವರ್ಷ ತುಂಬದ ಪುಟ್ಟ ಹೆಣ್ಣು ಮಗು ಇದೆ. ಆದರೆ ಇಬ್ಬರು ಸಾವನ್ನಪ್ಪಿದ್ದಾರೆ. ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿಯಾದ್ಲಾ ಎಂಬ ಅನುಮಾನ ಶುರುವಾಗಿದೆ.
ಹೆತ್ತವರು 40 ಎಕರೆ ಜಮೀನು ಇದ್ದ ಮೋಹನ್‌ಗೆ ಸ್ವಾತಿಯನ್ನು ಮದುವೆ ಮಾಡಿ ಕೊಟ್ಟಿದ್ದಾರೆ. ತಂದೆ-ತಾಯಿ ಹಾಗೂ ಪತ್ನಿ-ಮಗು ಜೊತೆ ತೋಟದ ಮನೆಯಲ್ಲಿದ್ರು.ಆಗಾಗ ಸಣ್ಣ-ಪುಟ್ಟ ಜಗಳ ಕೂಡ ಆಗ್ತಿತ್ತಂತೆ. ತವರು ಮನೆಗೆ ಹೋಗಿದ್ದ ಸ್ವಾತಿಯನ್ನು ಐದು ದಿನಗಳ ಹಿಂದಷ್ಟೇ ಮೋಹನ್ ಕರೆದುಕೊಂಡು ಬಂದಿದ್ದ. ಯಾವ್ದೋ ವಿಷಯಕ್ಕೆ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿದೆ. ತವರು ಮನೆಯಲ್ಲಿದ್ದ ಮಗುವನ್ನು ಭಾವನ ಮನೆಗೆ ಕರೆದುಕೊಂಡು ಬಂದಿದ್ದ ಸ್ವಾತಿ ಸಹೋದರನಿಗೆ ಶಾಕ್ ಎದುರಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಹೆಂಡತಿ ಮೃತದೇಹ ಪತ್ತೆಯಾಗಿದೆ.
ಸ್ವಾತಿ ಸಾವಿನ ಬಳಿಕ ಗಂಡ ಮೋಹನ್ ಹಾಗೂ ಆತನ ಪೋಷಕರು ಪರಾರಿಯಾಗಿದ್ರು. ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆಂದು ಮೃತಳ ಪೋಷಕರು ಆರೋಪ ಮಾಡಿದರು. ಮಗಳ ಸಾವಿಗೆ ಆಕ್ರೋಶಗೊಂಡ ಸಂಬಂಧಿಕರು ಆತನ ಮನೆಗೆ ನುಗ್ಗಿ ಮನೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪಕ್ಕದಲ್ಲಿ ಕೊಬ್ಬರಿ ಶೇಖರಿಸಿಟ್ಟಿದ್ದ ಮನೆಗೆ ಬೆಂಕಿ ಹಚ್ಚಿ ಎರಡು ಬೈಕ್‌ಗಳನ್ನ ಸುಟ್ಟು ಹಾಕಿದ್ದಾರೆ. ಮಗಳಿಗೆ ವರದಕ್ಷಿಣೆಗ ಕಿರುಕುಳ ಕೊಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಪತ್ನಿ ಸಾವಿನ ಬಳಿಕ ಪತಿ ಮೋಹನ್ ಎಸ್ಕೇಪ್ ಆಗಿದ್ದಾನೆ ಅನ್ಕೊಂಡಿದ್ರೆ ಬೆಳಗ್ಗೆ ಮನೆ ಸಮೀಪದಲ್ಲಿ ಇರೋ ಕೆರೆಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಪತ್ನಿ ಸಾವಿನ ಬೆನ್ನಲ್ಲೇ ಪತಿ ಕೂಡ ಕೆರೆ ಹಾರಿ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಅತ್ತೆ-ಸೊಸೆ ಮಧ್ಯೆ ಹೊಂದಾಣಿಕೆ ಕಡಿಮೆ ಇರುವುದರಿಂದ ಗಂಡ-ಹೆಂಡತಿ ನಡುವೆ ಆಗಾಗ ಜಗಳ ಆಗ್ತಿತ್ತು ಎಂಬುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.
ಆರ್.ಪೇಟೆ ತಾಲೂಕಿನ ಗದ್ದೆ ಹೊಸೂರು ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮತ್ತೆ ಗಲಾಟೆಯಾಗಬಹುದು ಅಂತ ಮನೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಪತ್ನಿಯನ್ನು ಪತಿಯೇ ಕೊಲೆ ಮಾಡಿದ್ನಾ ಗೊತ್ತಿಲ್ಲ. ಇತ್ತ ಪತಿಯೂ ಆತ್ಮಹತ್ಯೆ ಮಾಡ್ಕೊಬಿಟ್ಟಿದ್ದು ತನಿಖೆ ನಂತ್ರ ಸತ್ಯಾಸತ್ಯತೆ ಬಯಲಾಗಬೇಕಿದೆ. ಆದ್ರೆ ಏನು ತಪ್ಪು ಮಾಡದ ಪುಟ್ಟ ಕಂದಮ್ಮ ಮಾತ್ರ ತಂದೆ-ತಾಯಿ ಇಲ್ಲದೇ ಅನಾಥವಾಗಿದ್ದು ದೊಡ್ಡ ದುರಂತ