ಕ್ರೀಡೆ
ಮಂಗಳೂರು ವಿಶ್ವವಿದ್ಯಾನಿಲಯ ಕರಾಟೆ ಸ್ಪರ್ಧೆಯಲ್ಲಿ ವಿಘ್ನೇಶ್ ಎಂ.ನಾಯಕ್ ಗೆ ಚಿನ್ನದ ಪದಕ

Views: 75
ಕನ್ನಡ ಕರಾವಳಿ ಸುದ್ದಿ: ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ ಕರಾಟೆ ಸ್ಪರ್ಧೆಯಲ್ಲಿನ ಕಟಾ ವಿಭಾಗದಲ್ಲಿ ವಿಘ್ನೇಶ್ ಎಂ. ನಾಯಕ್ ಅವರು ಚಿನ್ನದ ಪದಕ ಪಡೆದಿರುತ್ತಾರೆ.
ಕುಂದಾಪುರ ತಾಲೂಕು ಹುಣ್ಸೆಮಕ್ಕಿಯ ಮಧುಸೂದನ್ ನಾಯಕ್ ಮತ್ತು ಶಶಿಕಲಾ ದಂಪತಿಯ ಪುತ್ರನಾದ ಇವರು ಪ್ರಸ್ತುತ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ದ್ವಿತೀಯ ಬಿ. ಕಾಂ. ವಿದ್ಯಾರ್ಥಿ. ಇವರು ಕುಂದಾಪುರದ ಕಿರಣ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ (ರಿ.) ದ ಕಿರಣ್ ಅವರಲ್ಲಿ ಕರಾಟೆ ತರಬೇತಿ ಪಡೆದು ಬ್ಲ್ಯಾಕ್ ಬೆಲ್ಟ್ ಗಳಿಸಿದ್ದರು. ವಿಘ್ನೇಶ್ ಎಂ. ನಾಯಕ್ ಇದೀಗ ಮಧ್ಯಪ್ರದೇಶ ರಾಜ್ಯದ ಭೋಪಾಲ್ ನಲ್ಲಿ ನಡೆಯುವ ಸೌತ್ ವೆಸ್ಟ್ ಝೋನ್ ಇಂಟರ್ ಯುನಿವರ್ಸಿಟಿ ಕರಾಟೆ ಟೂರ್ನಮೆಂಟ್ ನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.