ಇತರೆ

ಮಂಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ:ತಾಯಿ ಮಗಳು ಸಾವು 

Views: 97

ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಗುಳದ ಕೇರಿ ಬಳಿ ಆಕ್ಟಿವ್ ಹೊಂಡಾ ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ ಮಗಳು ಧಾರಣವಾಗಿ ಸಾವನ್ನಪ್ಪಿದ್ದಾರೆ.

ತಾಯಿ ಮಗಳು ಆಕ್ಟಿವ್ ಹೊಂಡಾದಲ್ಲಿ ಸಂಚರಿಸುವಾಗ ಮಂಗಳೂರಿನಿಂದ ಬೆಳಗಾಂ ಕಡೆಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿದ್ದು ಬಸ್ಸಿನ ಅಡಿಯಲ್ಲಿ ಆಕ್ಟಿವ್ ಹೊಂಡಾ ಸಿಲುಕಿಕೊಂಡಿದ್ದು, ಗಂಭೀರ ಗಾಯಗೊಂಡ ತಾಯಿ ಮಗಳನ್ನು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ಮುರುಡೇಶ್ವರ ಮಾವಳ್ಳಿಯ ನಾಡಾವರ ಕೇರಿ ಸವಿತಾ( 40) ಮಗಳು ಅಂಕಿತ( 17) ಎಂದು ತಿಳಿಯಲಾಗಿದೆ.

ತಾಯಿಯೊಂದಿಗೆ ಮಗಳು ಮಂಕಿ ಜಾತ್ರೆ ಮುಗಿಸಿ ವಾಪಾಸ್ ಆಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಬಸ್ ಚಾಲಕ ಸವದತ್ತಿಯ ಪಕೀರಪ್ಪ ಬಸಪ್ಪನ ಮೇಲೆ ಪ್ರಕರಣ ದಾಖಲಾಗಿದೆ

Related Articles

Back to top button