ಇತರೆ

ಭಾರತದಲ್ಲೂ ಹಮಾಸ್ ಮಾದರಿ ದಾಳಿ: ಪನ್ನು ಬೆದರಿಕೆ

Views: 0

ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು ದಾಳಿ ನಡೆಸಿ ರಕ್ತ ಸಿಕ್ತ ಅಧ್ಯಾಯಕ್ಕೆ ಕಾರಣವಾಗಿರುವ ಮಾದರಿಯಲ್ಲಿಯೇ ಪಂಜಾಬ್ ರಾಜ್ಯವನ್ನು ತಮ್ಮ ವಶಕ್ಕೆ ಪಡೆಯಲು ಹಮಾಸ್ ರೀತಿಯಲ್ಲೇ ದಾಳಿ ನಡೆಸುತ್ತೇವೆ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.

ಇಸ್ರೇಲ್ -ಪ್ಯಾಲೆಸ್ತೀನ್ ಸಂಘರ್ಷದಿಂದಾರೂ ಬುದ್ಧಿ ಕಲಿತುಕೊಳ್ಳಿ, ಹಮಾಸ್ ಮಾದರಿಯಲ್ಲೇ ದಾಳಿ ನಡೆಸುತ್ತೇವೆ.ಪಂಜಾಬ್ ವಶಕ್ಕೆ ಪಡೆಯುವುದು ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗು ಪಂಜಾಬ್ ಮುಖ್ಯಮಂತ್ರಿ ಅವರಿಗೆ ನೇರವಾಗಿಯೇ ಎಚ್ಚರಿಕೆ ಸಂದೇಶ ರವಾನಿಸಿದ್ದಾನೆ.

ಕಳೆದ ಕೆಲವು ತಿಂಗಳ ಹಿಂದೆ ಖಲಿಸ್ತಾನ ಹರ್ ದೀಪ್ ಸಿಂಗ್ ಗುಜ್ಜರ್ ಅವರ ಹತ್ಯೆ ಹಿಂದೆ ಭಾರತ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋಯ್ ಆರೋಪ ಮಾಡಿದ ನಂತರ ಭಾರತ ಕೆನಡಾ ನಡುವಿನ ಭಾಂಧವ್ಯ ಹದಗೆಟ್ಟಿದೆ. ಇದರ ಬೆನ್ನಲ್ಲೇ ಖಲಿಸ್ತಾನ ಭಾರತಕ್ಕೆ ಬೆದರಿಕೆ ಹಾಕಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ

ಇಸ್ರೇಲ್ ನಲ್ಲಿ ಹಮಾಸ್ ದಾಳಿಯಿಂದ ಪಾಠ ಕಲಿಯಿರಿ ಇಲ್ಲದಿದ್ದರೆ ಅದರ ಪರಿಣಾಮವನ್ನು ಎದುರಿಸಲು ಸಜ್ಜಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ ಅವರಿಗೆ ಉಗ್ರ ಪನ್ನು ಎಚ್ಚರಿಕೆ ನೀಡಿದ್ದಾನೆ

ವಿಡಿಯೋ ದಲ್ಲಿ ಕೆಂಡ ಕಾರಿದ ಉಗ್ರ;

ಖಲಿಸ್ತಾನಿ ಉಗ್ರ ಪನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಬೆದರಿಕೆ ಹಾಕಿದ್ದಾನೆ.40 ಸೆಕೆಂಡುಗಳ ವಿಡಿಯೋವಾಗಿದ್ದು, ಪನ್ನು ಭಾರತದ ವಿರುದ್ಧ ಕೆಂಡ ಕಾರಿದ್ದಾನೆಪಂಜಾಬ್ ನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ ಅದನ್ನು ಭಾರತದಿಂದ ಮುಕ್ತಗೊಳಿಸಲು ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತೇವೆ .ಪಂಜಾಬ್ ನಲ್ಲಿ ವಾಸಿಸುವ ಜನರು ಪ್ಯಾಲೆಸ್ತೀನ್ ನಂತೆ ಹಿಂಸಾಚಾರವನ್ನು ಪ್ರಾರಂಭಿಸಿದರೆ ಪರಿಸ್ಥಿತಿ ವಿನಾಶಕಾರಿಯಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ.

ಕೆಲ ದಿನಗಳ ಹಿಂದೆ ವಿಶ್ವಕಪ್ ಕ್ರಿಕೆಟ್ ವೇಳೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಖಲಿಸ್ತಾನಿ ಧ್ವಜವನ್ನು ಹಾರಿಸುವುದಾಗಿ ಬೆದರಿಕೆ ಹಾಕಿದ್ದ. ಉಗ್ರ ಇದೀಗ ಪಂಜಾಬ್ ಅನ್ನು ತಮ್ಮ ವಶಕ್ಕೆ ಪಡೆಯುವುದಾಗಿ ಹೇಳಿದ್ದಾನೆ

ಪಂಜಾಬ್ ಭಾರತದ ಭಾಗವಾಗಿರುವುದು ಇಷ್ಟವಿಲ್ಲ ಎಂದ ಗುಡಗಿದ ಖಲಿ ಸ್ಥಾನ ಉಗ್ರ

ಪಂಜಾಬ್ ತಮ್ಮ ವಶಕ್ಕೆ ಪಡೆಯಲು ಯಾವ ಹಂತಕ್ಕೆ ಬೇಕಾದರೂ ಹೋಗಲು ಸಿದ್ದ

ಇಸ್ರೇಲ್ ಮೇಲೆ ನಡೆದ ದಾಳಿಯ ಮಾದರಿಯಲ್ಲೇ ಭಾರತದ ಮೇಲೆ ಬಾಳಿಯ ಬೆದರಿಕೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ. ಮಾನ್ ಗೆ ನೇರ ಸಂದೇಶ ರವಾನಿಸಿದ್ದಾನೆ ಪನ್ನು

ಉಗ್ರನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ

ವಿಡಿಯೋ ಮೂಲಕ ಭಾರತಕ್ಕೆ ಎಚ್ಚರಿಕೆ ನೀಡಿದ ಉಗ್ರ

Related Articles

Back to top button