ಜನಮನ
ಬೈಕ್ಗೆ ಡಿಕ್ಕಿ ಹೊಡೆದ ಬಸ್:ಮಾವ, ಅಳಿಯ ಸಾವು

Views: 52
ಕಲಬುರಗಿ: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಆಳಂದ- ಹಿರೊಳ್ಳಿ ಮಾರ್ಗದಲ್ಲಿ ನಡೆದಿದೆ.
ಸಿದ್ದಲಿಂಗಯ್ಯ ಹಿರೇಮಠ (40) ಮತ್ತು ಅವರ ಸಹೋದರನ ಮಗ ಎಂಟು ವರ್ಷದ ಸಂಕೇತ ಮೃತ ದುರ್ದೈವಿಗಳು. ಆಳಂದದಿಂದ ಹಿರೊಳ್ಳಿಗೆ ತೆರಳುತ್ತಿದ್ದಾಗ ಎದುರುಗಡೆಯಿಂದ ಬರುತ್ತಿದ್ದ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಆಳಂದ ಪಟ್ಟಣದ ಆಡಳಿತ ಸೌಧದ ಬಳಿ ದುರ್ಘಟನೆ ಸಂಭವಿಸಿದೆ.
ನಾಗಮ್ಮ ಮತ್ತು ಅಂಕಿತಾ ಎನ್ನುವ ಇನ್ನಿಬ್ಬರಿಗೆ ತೀವ್ರ ಗಾಯವಾಗಿದ್ದು, ಆಳಂದ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ