ಬೆಳಗಾವಿಯಲ್ಲಿ ಸಿಲಿಂಡರ್ ಸ್ಫೋಟ ಉಡುಪಿ ಮೂಲದ ಅಜ್ಜಿ, ಮೊಮ್ಮಗ ದಾರುಣ ಸಾವು, ಮೂವರ ಸ್ಥಿತಿ ಗಂಭೀರ

Views: 70
ಬೆಳಗಾವಿ: ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಬಲಿಯಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ನಗರದ ಬಸವನಗಲ್ಲಿಯ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.
ಉಡುಪಿ ಮೂಲದ ಕಾಮಾಕ್ಷಿ ಭಟ್ (80), ಹೇಮಂತ್ ಭಟ್ (27) ಮೃತ ದುರ್ದೈವಿಗಳು. ಅಪಾರ್ಟ್ಮೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭೀಕರ ಅಪಘಾತ ನಡೆದಿದ್ದು, ಮನೆಯಲಿದ್ದ ಐವರಿಗೆ ಗಂಭೀರ ಗಾಯಗಳಾಗಿವೆ.
ಘಟನೆಯಲ್ಲಿ ಗಾಯಗೊಂಡಿದ್ದ ಐವರ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತಪಟ್ಟ ಹೇಮಂತ್ ಮೋಹನ್ ಭಟ್ ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಕೆಲಸದ ನಿಮಿತ್ತ ಹೈದರಾಬಾದ್ಗೆ ತೆರಳಿದ್ದ ಅವರು ಶನಿವಾರವಷ್ಟೇ ಮನೆಗೆ ಆಗಮಿಸಿದ್ದರು. ಹೇಮಂತ್ ಸಹೋದರ ರೋಹಿತ್ ಇದೇ ಸಂದರ್ಭದಲ್ಲಿ ಸ್ನೇಹಿತನನ್ನು ಬಿಡಲು ಹೊರಗಡೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮನೆಯಲ್ಲಿ ಸಿಲಿಂಡರ್ ಗ್ಯಾಸ್ ಸೋರಿಕೆ ಆಗುತ್ತಿರುವುದು ಗಮನಕ್ಕೆ ಬಂದ ಕೂಡಲೇ ಮನೆಯಲ್ಲಿದ್ದ ಹೇಮಂತ್ ಅವರ ತಂದೆ ಮೋಹನ್ ಅವರು ವಿದ್ಯುತ್ ದೀಪ ಹಚ್ಚಿದಂತೆ ತಿಳಿಸಲು ಅಕ್ಕಪಕ್ಕದ ಮನೆಗಳಿಗೆ ಹೋಗಿದ್ದರು ಹೇಳಿ ವಾಪಸ್ ಬರುವಷ್ಟರಲ್ಲಿ ದುರಂತ ಸಂಭವಿಸಿದೆ ಮೋಹನ್ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
ಘಟನೆ ಕುರಿತು ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.