ಯುವಜನ

ಬೆಳಗಾವಿಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

Views: 147

ಕನ್ನಡ ಕರಾವಳಿ ಸುದ್ದಿ: ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬಾಲಕಿಯನ್ನು ನಯವಾಗಿ ಮಾತನಾಡಿಸಿ ಯುವಕರ ಗ್ಯಾಂಗ್ ನಗರ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಮೂವರು ಬಾಲಕರು ಮೊದಲಿಗೆ ಪಾರ್ಟಿ ಮಾಡಿದ್ದು, ಆ ಬಳಿಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.ಮೂವರು ಅಪ್ರಾಪ್ತರು ಅತ್ಯಾಚಾರ ಮಾಡಿದ್ದಾಗಿ ದೂರು ದಾಖಲಾಗಿದೆ.

ಈ ಘಟನೆ ಮೇ 6ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ನಗರದ ಪೊಲೀಸ್ ಠಾಣೆಗೆ ಬಾಲಕಿಯ ಪೋಷಕರು ದೂರು ನೀಡಿದ್ದಾರೆ.

ಕೂಡಲೇ ತನಿಖೆ ಮಾಡಿದ ಪೊಲೀಸರು ಈಗಾಗಲೇ ಇಬ್ಬರು ಬಾಲಕರನ್ನು ಅರೆಸ್ಟ್ ಮಾಡಿ ಬಾಲ ಮಂದಿರಕ್ಕೆ ಸೇರಿಸಿದ್ದಾರೆ ಎನ್ನಲಾಗಿದೆ. ಸದ್ಯ ಇನ್ನೋರ್ವ ಬಾಲಕನಿಗಾಗಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ.

 

 

Related Articles

Back to top button