ರಾಜಕೀಯ
ಬೆಂಗಳೂರಿನಲ್ಲಿ ಜುಲೈ 17, 18 ರಂದು ವಿರೋಧ ಪಕ್ಷಗಳ ಸಭೆ :ಕಾಂಗ್ರೆಸ್

Views: 0
ಜುಲೈ 17, 18 ರಂದು ವಿರೋಧ ಪಕ್ಷಗಳ ಮುಂದಿನ ಸಭೆಯನ್ನು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
ಪಾಟ್ನಾದಲ್ಲಿ ಅತ್ಯಂತ ಯಶಸ್ವಿಯಾಗಿ ವಿರೋಧ ಪಕ್ಷಗಳ ಸಭೆಯ ನಂತರ ಟ್ವೀಟ್ ಮಾಡಿದ ಅವರು,ಪ್ಯಾಸಿಸ್ಟ್ ಮತ್ತು ಅಪ್ರಜಾಸತ್ತಾತ್ಮಕ ಶಕ್ತಿಗಳನ್ನು ಸೋಲಿಸಲು ಮತ್ತು ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ದೃಷ್ಟಿಯನ್ನು ಪ್ರಸ್ತುತಪಡಿಸುವ ನಮ್ಮ ಸಂಕಲ್ಪದಲ್ಲಿ ನಾವು ಅಚಲರಾಗಿದ್ದೇವೆ ಎಂದಿದ್ದಾರೆ.
ಇತ್ತೀಚಿಗೆ ಬಿಹಾರ್ ಸಿಎಂ ನಿತೀಶ್ ಕುಮಾರ್ ಮತ್ತು ಡಿಸಿಎಂ ತೇಜಸ್ವಿ ಯಾದವ್ ಕರೆದಿದ್ದ 15 ವಿರೋಧ ಪಕ್ಷದ ಸಭೆ ಯಶಸ್ವಿಯಾಗಿದ್ದು, ಪಾಟ್ನಾದ ನಂತರ ವಿರೋಧ ಪಕ್ಷಗಳ ಮುಂದಿನ ಸಭೆಯನ್ನು ಹಿಮಾಚಲ ಪ್ರದೇಶದಲ್ಲಿ ನಡೆಸಲಾಗುವುದು ಎಂದು ಹೇಳಲಾಯಿತು. ಆದರೆ, ದಕ್ಷಿಣ ಭಾರತದಲ್ಲಿ ನಡೆಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು ಎಂದು ಶರದ್ ಪವಾರ್ ಮತ್ತು ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.