ಧಾರ್ಮಿಕ

ಬಾರ್ಕೂರು:ವಾರ್ಷಿಕ ಮಹಾಸಭೆ, ಜಾತ್ರಾ ಮಹೋತ್ಸವ ಸಂಪನ್ನ 

Views: 184

ಕನ್ನಡ ಕರಾವಳಿ ಸುದ್ದಿ: ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಹಾಲು ಹಬ್ಬ ವಾರ್ಷಿಕ ಪೂಜೆ ಗೆಂಡಸೇವೆ ಬುಧವಾರ ಸಂಪನ್ನಗೊಂಡಿದೆ.

ಅಪರಾಹ್ನ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಡಾ.ಜಯರಾಮ ಶೆಟ್ಟಿಗಾರ್ ವಹಿಸಿದ್ದರು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಕಾರ್ಯಕ್ರಮ ಉದ್ಘಾಟಿಸಿದರು.

ವಿಶೇಷ ಅಹ್ವಾನಿತರಾಗಿ ವೈದ್ಯಾಧಿಕಾರಿಗಳಾದ ಡಾ.ಗೌತಮ್ ಶೆಟ್ಟಿಗಾರ್, ಬಳ್ಮನೆ ಚತುರ್ಮುಖ ಬ್ರಹ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕರುಣಾಕರ ಶೆಟ್ಟಿಗಾರ್, ಸಹ ಮೊಕ್ತೇಸರರಾದ ಚಂದ್ರಶೇಖರ್ ಶೆಟ್ಟಿಗಾರ ಹೊಸಾಳ, ಡಾ. ಚಂದ್ರಶೇಖರ್ ವಿ ಎಸ್ ಕೆಳಾರ್ಕಳಬೆಟ್ಟು, ವಿನಯಕುಮಾರ್ ಸಿ ಕೆ ಸಾಸ್ತಾನ, ಸುರೇಶ್ ಹೆಂಗವಳ್ಳಿ, ಸುಧಾಕರ ವಕ್ವಾಡಿ, ರಾಮ ಕೊಡ್ಲಾಡಿ, ರಘುರಾಮ್ ಶೆಟ್ಟಿಗಾರ ಬಾರ್ಕೂರು, ಶ್ರೀಮತಿ ಚಂದ್ರಾವತಿ ಸದಾಶಿವ ಶೆಟ್ಟಿಗಾರ ಬ್ರಹ್ಮಾವರ, ಮಾಗಣಿ ಗುರಿಕಾರರಾದ ಉದಯ ಶೆಟ್ಟಿಗಾರ್ ಬಾರ್ಕೂರು, ಕೃಷ್ಣ ಶೆಟ್ಟಿಗಾರ ಜಪ್ತಿ, ನರಸಿಂಹ ಶೆಟ್ಟಿಗಾರ್ ಬಳ್ಮನೆ ಅಮವಾಸೆ ಬೈಲು,ಶ್ರೀನಿವಾಸ ಶೆಟ್ಟಿಗಾರ ನೀಲಾವರ, ಪದ್ಮನಾಭ ಶೆಟ್ಟಿಗಾರ ಸಾಸ್ತಾನ, ಗೋಪಾಲ ಶೆಟ್ಟಿಗಾರ್ ಬಸ್ರೂರು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಚ್ ಎ ಗೋಪಾಲ, ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಸಿ. ಪುರುಷೋತ್ತಮ ಮಣಿಪಾಲ, ಸಂಘಟನಾ ಸಮಿತಿಯ ಅಧ್ಯಕ್ಷ ಆನಂದ ಶೆಟ್ಟಿಗಾರ ಚೀರ್ಕಾಡಿ, ಯುವ ವೇದಿಕೆಯ ಅಧ್ಯಕ್ಷ ಸಂಜೀವ ಶೆಟ್ಟಿಗಾರ ಸಂಸ್ಥಾನ, ಶ್ರೀಮತಿ ಕವಿತಾ ಜೆ ಎಸ್ ಸಂತೆಕಟ್ಟೆ, ನಾರಾಯಣ ಶೆಟ್ಟಿಗಾರ ಸುರತ್ಕಲ್, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಆಶಾ ವಿಠ್ಠಲ ಶೆಟ್ಟಿಗಾರ್ ಕೆಳಾರ್ಕಳಬೆಟ್ಟು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾಧಕರು, ದಾನಿಗಳು ಹಾಗೂ ದೇಗುಲದ ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡವರನ್ನು ಗೌರವಿಸಲಾಯಿತು.

ರಾಮ ಶೆಟ್ಟಿಗಾರ್ ಕೊಡ್ಲಾಡಿ ಪ್ರಾರ್ಥಿಸಿದರು. ಶಿಲ್ಪಾ ರವಿರಾಜ್ ಶೆಟ್ಟಿಗಾರ್ ಸ್ವಾಗತಿಸಿದರು. ಶಿಕ್ಷಕ ನಾರಾಯಣ ಶೆಟ್ಟಿಗಾರ್ ಹಂದಾಡಿ ನಿರೂಪಿಸಿದರು. ದಾನಿಗಳ ಪಟ್ಟಿಯನ್ನು ಅನುಷಾ ವಾಚಿಸಿದರು. ಕಾರ್ಯದರ್ಶಿ ಭಾಸ್ಕರ್ ಶೆಟ್ಟಿಗಾರ್ ಸಾಸ್ತಾನ ವಂದಿಸಿದರು.

Related Articles

Back to top button
error: Content is protected !!