ಸಾಮಾಜಿಕ

ಪ್ರೀತಿಸಿ ಮದುವೆಯಾಗಿದ್ದಕ್ಕೆ ವಿರೋಧ:ಪತಿ ಮನೆಯಿಂದಲೇ ಯುವತಿಯನ್ನು ಹೊತ್ತೊಯ್ದ ಪೋಷಕರು!

Views: 82

ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಪತಿ ಮನೆಯಿಂದಲೇ ಬಲವಂತವಾಗಿ ಪೋಷಕರು ಹೊತ್ತೊಯ್ದು ಯುವಕನಿಗೆ ಬೆದರಿಕೆ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಬೈರಿಕೊಪ್ಪ ಗ್ರಾಮದ ನಿರಂಜನ್ ಹಾಗೂ ಸುಷ್ಮಾ ಪರಸ್ಪರ ಪ್ರೀತಿಗೆ ಹೆತ್ತವರ ವಿರೋಧವಿತ್ತು. ಕಳೆದ ಎಂಟು ವರ್ಷದಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಅಲ್ಲದೇ 2 ವರ್ಷದ ಹಿಂದೆಯೇ ಗದಗನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಪೋಷಕರ ವಿರೋಧಕ್ಕೆ ಮಣಿದು, ಇಬ್ಬರು ದೂರವಾಗಿ ವೇದನೆ ಪಡುತ್ತಿದ್ದರು. ಈ ನಡುವೆ ಪತಿ ಮನೆಗೆ ಬಂದಿದ್ದ ಯುವತಿಯನ್ನು ಪೋಷಕರು ಬಲವಂತವಾಗಿ ಎಳೆದೊಯ್ದಿದ್ದಾರೆ.

ಪ್ರೀತಿಸಿ ಮದುವೆಯಾದ ಪತಿಯನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ನಿರಂಜನ್ ಮನೆಗೆ ಸುಷ್ಮಾ ಬಂದಿದ್ದಳು. ಈ ವೇಳೆ ಯುವತಿ ತಂದೆ ಪರಶುರಾಮ, ಮಾವಂದಿರಾದ ಮಹಾಂತೇಶ್, ಮಂಜು ಸೇರಿ ನಿರಂಜನ್‌ಗೆ ಧಮ್ಕಿ ಹಾಕಿ ಗಂಡನ ಮನೆಯಲ್ಲಿ ಕುಳಿತಿದ್ದ ಸುಷ್ಮಾಳನ್ನು ಗೋಣಿ ಚೀಲದಲ್ಲಿ ಹೊತ್ತೊಯ್ದಿದ್ದಾರೆ.

ಸುಷ್ಮಾ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪತಿ ನಿರಂಜನ್‌ಗೆ ಆಕೆ ಕುಟುಂಬಸ್ಥರು ಧಮ್ಕಿ ಹಾಕಿದ್ದಾರೆ. ಸದ್ಯ ಈ ಜೋಡಿ ರಕ್ಷಣೆಗಾಗಿ ಹುಬ್ಬಳ್ಳಿಯ ಪೊಲೀಸರ ಮೊರೆ ಹೋಗಿದ್ದಾರೆ. ಮದುವೆಯಾಗಿ ನಾವು ಒಂದು ತಿಂಗಳು ಜತೆಗೆ ಇದ್ದೆವು. ನಮ್ಮ ಮನೆಗೆ ಬಂದು ಒತ್ತಾಯ ಪೂರ್ವಕವಾಗಿ ನನ್ನ ಪತ್ನಿಯನ್ನು ಎತ್ತಿಕೊಂಡು ಹೋಗಿದ್ದಾರೆ. ಅಲ್ಲದೆ ನನಗೂ ಬೆದರಿಕೆ ಹಾಕಿದ್ದಾರೆ. ನಮ್ಮಿಬ್ಬರಿಗೂ ರಕ್ಷಣೆ ನೀಡಬೇಕೆಂದು ನಿರಂಜನ್ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

Related Articles

Back to top button
error: Content is protected !!