ಸಾಂಸ್ಕೃತಿಕ

ಪ್ರದೋಷ್ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ? ನಟ ದರ್ಶನ್‌ಗೆ ಖಾಯಂ ಜೈಲೇ ಗತಿ!

Views: 127

ಕನ್ನಡ ಕರಾವಳಿ ಸುದ್ದಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಮತ್ತಷ್ಟು ಕಾನೂನು ಸಂಕಷ್ಟ ಎದುರಾಗಿದ್ದು, ಪ್ರಕರಣದ 14ನೇ ಆರೋಪಿ(ಎ-14) ಪ್ರದೋಷ್ ತನ್ನನ್ನು ‘ಮಾಫಿ ಸಾಕ್ಷಿ’ಯಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನಟ ದರ್ಶನ್ ಅವರ ವಿರುದ್ಧ ಸ್ನೇಹಿತರೇ ಸಾಕ್ಷ್ಯ ಹೇಳಲು ನಿರ್ಧರಿಸಿದ್ದು, ಪ್ರಕರಣ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ದೊಡ್ಡ ತಿರುವು ಪಡೆದುಕೊಂಡಿದೆ. ಹೀಗಾಗಿ ಜೈಲಿನಲ್ಲಿರುವ ನಟ ದರ್ಶನ್, ಹಾಗೂ ಪವಿತ್ರಾ ಗೌಡ ಅವರಿಗೆ ಭಾರೀ ಟೆನ್ಶನ್ ಶುರುವಾಗಿದೆ.

ಪ್ರದೋಷ್ ನ್ಯಾಯಾಲಯಕ್ಕೆ ಸಲ್ಲಿಸಿರುವ 11 ಪುಟಗಳ ಕ್ಷಮಾದಾನ ಅರ್ಜಿ(ಮಾಫಿ ಸಾಕ್ಷಿ)ಯಲ್ಲಿ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಜಯನಗರದ ಮೈದಾನದಲ್ಲಿ ದರ್ಶನ್ ಪರಿಚಯವಾದ ದಿನದಿಂದ ಹಿಡಿದು ಜೈಲು ಪಾಲಾಗುವವರೆಗಿನ ಇಡೀ ಘಟನಾವಳಿಯನ್ನು ಎಳೆಎಳೆಯಾಗಿ ಸಿಸಿಎಚ್-59 ನ್ಯಾಯಾಧೀಶರ ಮುಂದೆ ಪ್ರದೋಷ್ ಬಿಚ್ಚಿಟ್ಟಿದ್ದಾನೆ.

ಅರ್ಜಿಯಲ್ಲಿ ಏನಿದೆ?

2003ರಲ್ಲಿ ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ನನಗೆ ದರ್ಶನ್‌ ಅವರ ಪರಿಚಯಲಾಯಿತು. 2024 ರ ಜೂನ್ 8 ರಂದು ನಾನು ದರ್ಶನ್ ಮನೆಗೆ ತೆರಳಿದ್ದೆ. ಅಲ್ಲಿಂದ ನನ್ನನ್ನು ದರ್ಶನ್‌ ‘ಸ್ಟೋನಿ ಬ್ರೂಕ್ಸ್’ ರೆಸ್ಟೋರೆಂಟ್‌ಗೆ ಕರೆದೊಯ್ದರು.

ಮಧ್ಯಾಹ್ನ 3 ಗಂಟೆಗೆ ಪವನ್ ರೆಸ್ಟೋರೆಂಟ್‌ಗೆ ಬಂದು ದರ್ಶನ್‌ಗೆ ಮೊಬೈಲ್‌ನಲ್ಲಿ ಏನೋ ತೋರಿಸಿದ್ದ. ಅದನ್ನು ನೋಡಿ ಕೋಪಗೊಂಡ ದರ್ಶನ್, ತಕ್ಷಣವೇ ಪವಿತ್ರಾ ಗೌಡಗೆ ಕರೆ ಮಾಡಿ ಮಾತನಾಡಿದರು. ಬಳಿಕ ಪವಿತ್ರಾ ಗೌಡ ನಿವಾಸದ ಕಡೆಗೆ ಕಾರು ಚಲಾಯಿಸುವಂತೆ ನನಗೆ ಸೂಚಿಸಿದರು.

ಸಂಜೆ 4:30 ಕ್ಕೆ ಪವಿತ್ರಾ ಗೌಡ ನಿವಾಸ ತಲುಪಿದ ದರ್ಶನ್ ಹಾಗೂ ಪವಿತ್ರಾ, ಒಂದೇ ಕಾರಿನಲ್ಲಿ ಆರ್‌ಆರ್ ನಗರದ ಪಟ್ಟಣಗೆರೆ ಶೆಡ್‌ಗೆ ತಲುಪಿದರು. ಶೆಡ್‌ಗೆ ಪ್ರವೇಶಿಸಿದಾಗ 30 ವರ್ಷದ ರೇಣುಕಾಸ್ವಾಮಿ ತಲೆಬಾಗಿಸಿಕೊಂಡು ಕುಳಿತಿದ್ದ. ಆತನ ಸುತ್ತ ರಾಘವೇಂದ್ರ, ಪವನ್, ನಾಗರಾಜ್ ಹಾಗೂ ನಂದೀಶ್ ಇದ್ದರು.

“ನನ್ನ ಪವಿತ್ರಾಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತೀಯಾ?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ದರ್ಶನ್, ರೇಣುಕಾಸ್ವಾಮಿಗೆ ಹೊಡೆದರು. ನಂತರ ದರ್ಶನ್ ಸೂಚನೆಯಂತೆ ಪವಿತ್ರಾ ಗೌಡ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹೊಡೆದರು.

ರೇಣುಕಾಸ್ವಾಮಿಯ ಬಟ್ಟೆ ಬಿಚ್ಚಿ ಒಳ ಉಡುಪಿನಲ್ಲಿ ನಿಲ್ಲಿಸಲಾಯಿತು. ನಂದೀಶ್ ಆತನನ್ನು ಟಾಟಾ ಏಸ್ ವಾಹನಕ್ಕೆ ನೇಣು ಹಾಕಲು ಯತ್ನಿಸಿದರೆ, ನಾಗರಾಜ್ ನೈಲಾನ್ ಹಗ್ಗದಿಂದ ಹಾಗೂ ನಂದೀಶ್-ಪವನ್ ಮರದ ಕೋಲಿನಿಂದ ಬಾರಿಸಿದರು.

ರೇಣುಕಾಸ್ವಾಮಿಯ ಇನ್‌ಸ್ಟಾಗ್ರಾಂನಲ್ಲಿ ‘ಗೌತಮ್’ ಹೆಸರಿನ ಪ್ರೊಫೈಲ್ ಪತ್ತೆಯಾಯಿತು. ಅದರಲ್ಲಿ ಹಲವು ಮಹಿಳೆಯರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದು ಕಂಡುಬಂದಾಗ ದರ್ಶನ್ ಆತನ ಒಳ ಉಡುಪನ್ನೂ ತೆಗೆಸಿ, ಖಾಸಗಿ ಅಂಗಕ್ಕೆ ಸಾಲು ಸಾಲು ಒದೆಗಳನ್ನು ನೀಡಿದರು. ಕೊನೆಗೆ ಎರಡೂ ಕಾಲುಗಳಿಂದ ರೇಣುಕಾಸ್ವಾಮಿಯ ಎದೆ ತುಳಿದು ವಿನಯ್ ಜೊತೆ ಸಂಜೆ 5:30 ಕ್ಕೆ ಸ್ಥಳದಿಂದ ತೆರಳಿದರು.

ಕೊಲೆ ನಡೆಯುತ್ತಿದ್ದ ವೇಳೆ ರೇಣುಕಾಸ್ವಾಮಿಯನ್ನು ರಕ್ಷಿಸಲು ಯತ್ನಿಸಿದ್ದೆ ಎಂದು ಕೂಡಾ ಮಾಫಿ ಸಾಕ್ಷಿ ಪ್ರದೋಶ್ ಹೇಳಿದ್ದಾರೆ. ಹಲ್ಲೆ ನಿಲ್ಲಿಸುವಂತೆ ಸಹ ಆರೋಪಿಗಳಿಗೆ ತಾನು ಮನವಿ ಮಾಡಿದ್ದಾಗಿಯೂ ಅರ್ಜಿಯಲ್ಲಿ ತಿಳಿಸಿದ್ದಾರೆ.

Related Articles

Back to top button
error: Content is protected !!