ಇತರೆ

ಪಾಕಿಸ್ತಾನದಿಂದ 15 ಲಕ್ಷಕ್ಕೂ ಹೆಚ್ಚು ಸೈಬ‌ರ್ ದಾಳಿ

Views: 75

ಕನ್ನಡ ಕರಾವಳಿ ಸುದ್ದಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ದೇಶಾದ್ಯಂತ ನಿರ್ಣಾಯಕ ಮೂಲಸೌಕರ್ಯ ವೆಬ್‌ಸೈಟ್‌ಗಳನ್ನು ಗುರಿಯಾಗಿಸಿಕೊಂಡು 15 ಲಕ್ಷಕ್ಕೂ ಹೆಚ್ಚು ಸೈಬ‌ರ್ ದಾಳಿಗಳನ್ನು ನಡೆಸಿದ ಏಳು ಅಡ್ವಾನ್ಸ್‌ ಪರ್ಸಿಸ್ಟೆಂಟ್ ಫ್ರೆಟ್ ಗುಂಪುಗಳನ್ನು ಭಾರತೀಯ ಸೈಬರ್ ಏಜೆನ್ಸಿಗಳು ಗುರುತಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಡ್ಯಾನ್ಸ್ ಆಫ್ ಹಿಲರಿ’ ಮತ್ತು ‘ಕಾಲ್ಸ್ ಫ್ರಮ್ ಮಿಲಿಟರಿ’ ಎಂಬ ಸಂಕೇತನಾಮ ಹೊಂದಿರುವ ಮಾಲ್‌ವೇರ್‌ಗಳ ಮೂಲಕ ಕೆಲವು ಪಾಕಿಸ್ತಾನಿ ಗುಪ್ತಚರ ಕಾರ್ಯಾಚರಣೆಗಳು ಭಾರತದಲ್ಲಿ ರಕ್ಷಣಾ ಸಿಬ್ಬಂದಿ ಮತ್ತು ಪತ್ರಕರ್ತರು ಬಳಸುವ ಮೊಬೈಲ್ ಫೋನ್‌ಗಳನ್ನು ಗುರಿಯಾಗಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ಹೇಳಿದರು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮಧ್ಯಪ್ರಾಚ್ಯ ಪ್ರದೇಶದಿಂದ ಈ ದಾಳಿಗಳು ನಡೆದಿರುವುದರಿಂದ 15 ಲಕ್ಷ ಸೈಬರ್ ದಾಳಿ ಪ್ರಯತ್ನಗಳಲ್ಲಿ ಕೇವಲ 150 ಮಾತ್ರ ಯಶಸ್ವಿಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ-ಪಾಕಿಸ್ತಾನ ಎರಡೂ ಕಡೆಯಿಂದ ಗುಂಡಿನ ದಾಳಿ ನಡೆಸದಂತೆ ಕದನ ವಿರಾಮ ಒಪ್ಪಂದ ಮಾಡಿಕೊಂಡ ನಂತರ ಭಾರತದಲ್ಲಿ ಸರ್ಕಾರಿ ವೆಬ್‌ಸೈಟ್‌ಗಳ ಮೇಲಿನ ಸೈಬ‌ರ್ ದಾಳಿಗಳು ಕಡಿಮೆಯಾಗಿವೆ ಎಂದು ನಮ್ಮ ತನಿಖೆಯಲ್ಲಿ ಕಂಡುಬಂದಿದೆ, ಆದರೆ ಸಂಪೂರ್ಣವಾಗಿ ನಿಂತಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಷ್ಯಾ, ಮೊರಾಕೊ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಈ ದಾಳಿಗಳು ಮುಂದುವರೆದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Related Articles

Back to top button