ಸಾಂಸ್ಕೃತಿಕ

ಪರಪ್ಪನ ಅಗ್ರಹಾರದ ಜೈಲಿಗೆ ಬೇಟಿ ನೀಡಿ ದರ್ಶನ್‌ರನ್ನು “ಆದಷ್ಟು ಬೇಗ ಬನ್ನಿ” ಎಂದು ಹೇಳಿದ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ 

Views: 74

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಌಂಡ್ ಗ್ಯಾಂಗ್ 76ನೇ ದಿನದತ್ತ ಕಾಲಿಟ್ಟಿದ್ದಾರೆ. ಆದ್ರೆ 17 ಆರೋಪಿಗಳ ಪೈಕಿ ಎಲ್ಲರಿಗಿಂತ ಮೊದಲು ಹೊರಗೆ ಹಾರಿ ಹೋಗಲು ಜೈಲು ಹಕ್ಕಿ ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ಕೋರ್ಟ್ ವಿಚಾರಣೆ ಮೂಂದೂಡಿದ್ದು ಮತ್ತಷ್ಟು ದಿನಗಳ ಕಾಲ ಜೈಲುವಾಸಕ್ಕೆ ಕಳಿಸಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ದರ್ಶನ್‌ರನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ 2 ತಿಂಗಳ ಬಳಿಕ ಭೇಟಿಯಾಗಿದ್ದಾರೆ. ದರ್ಶನ್ ಆಪ್ತ ಸಚ್ಚಿದಾನಂದ್ ಜೊತೆಗೆ ಬಂದಿದ್ದ ರಚಿತಾರಾಮ್ ದರ್ಶನ್‌ಗಾಗಿ 3 ಬ್ಯಾಗ್‌ಗಳಲ್ಲಿ ಹಣ್ಣು, ತಿಂಡಿಗಳನ್ನು ತಗೊಂಡು ಬಂದಿದ್ದಾರೆ. ಕೇಸ್ಗೆ ಸಂಬಂಧಿಸಿದಂತೆ ದರ್ಶನ್ ಜೊತೆ ಕೆಲ ಕಾಲ ಮಾತುಕತೆ ನಡೆಸಿ ವಾಪಸ್ಸಾಗಿದ್ದಾರೆ.

ದರ್ಶನ್ರನ್ನ ಆ ತರ ನೋಡೋದಕ್ಕೆ ಕಷ್ಟ ಆಗುತ್ತದೆ. ಎಲ್ಲರೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಅಭಿಮಾನಿಗಳು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದರೋ, ನಾನು ಅಷ್ಟೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸರ್ ನಾವೆಲ್ಲ ನಿಮಗಾಗಿ ಕಾಯುತ್ತಿದ್ದೇವೆ. ಆದಷ್ಟು ಬೇಗ ಬನ್ನಿ ಅಂತ ಹೇಳಿ ಬಂದೆ ಎಂದು ರಚಿತಾ ರಾಮ್ ಹೇಳಿದ್ದಾರೆ.

Related Articles

Back to top button