ಇತರೆ

ಪತ್ನಿಯೊಂದಿಗಿನ ಜಗಳ: ಕೋಪಗೊಂಡ ಆಳಿಯ ಮಾವನನ್ನು ಚಾಕುವಿನಿಂದ ಇರಿದು ಕೊಲೆ 

Views: 69

ಕನ್ನಡ ಕರಾವಳಿ ಸುದ್ದಿ: ಪತ್ನಿಯೊಂದಿಗಿನ  ಜಗಳದಿಂದ ಕೋಪಗೊಂಡ ಆಳಿಯ ಮಾವನನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ.

ಬುಟಿಬೋರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬೋರ್ಖೇಡಿ ಗ್ರಾಮದಲ್ಲಿ ಈ ದಾಳಿ ನಡೆದಿದೆ.

ತನ್ನ ಮಾವ ಅರುಣ್ ಜ್ಞಾನದೇವ್ ಭಗತ್ (65) ಅವರನ್ನು ಹರಿತವಾದ ವಸ್ತುವಿನಿಂದ ಇರಿದು ಆರೋಪಿ ಪಂಕಜ್ ದೇವರಾವ್ ಗಜ್ಜಿಯೆ (30 ಸ್ಥಳದಲ್ಲೇ ಕೊಂದಿದ್ದಾನೆ

ಆರೋಪಿ ಕಳೆದ ವರ್ಷ ಮದುವೆಯಾಗಿದ್ದ ನಂತರ ಕೌಟುಂಬಿಕ ಕಲಹದಿಂದಾಗಿ ಅದು ತಾರಕಕ್ಕೆ ಏರಿತ್ತು. ಇದರಿಂದ ಅಕೋಲಿಯಲ್ಲಿರುವ ಮಗಳ. ಮನೆಗೆ ತಂದೆ ಬಂದಿದ್ದರು ಈ ವೇಳೆ ಗಂಡ ಹೊಡೆಯುತ್ತಾನೆ ಎಂದು ಅಳಲು ತೋಡಿಕೊಂಡಾಗ ಆಕೆಯನ್ನು ಕರೆದುಕೊಂಡು ತಮ್ಮ ಮನೆಗೆ ಹೋಗಿದ್ದರು.

ಇದರಿಂದ ಕೋಪಗೊಂಡ ಪಂಕಜ್ ದೇವರಾವ್ ಗಜ್ಜಿಯೆ ಅವರನ್ನು ಹಿಂಬಾಲಿಸಿದ್ದ ಬೋರ್ಖೇಡಿಯಲ್ಲಿರುವ ಅವರ ಮನೆಗೆ ಬಂದು ಮಾವನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ

ನಂತರ ನಡು ರಸ್ತೆಗೆ ಹೊಡೆದಾಟ ನಡೆದು ಚೂರಿಯಿಂದ ಅಳಿಯ ಮಾವನಿಗೆ ಇರಿದು ಕೊಂದಿದ್ದಾನೆ.ಸದ್ಯ ಕೊಲೆ ಪ್ರಕರಣ ದಾಖಲಿಸಲಾಗಿದೆ ಪರಾರಿಯಾಗಿರುವ ಗಜ್ಜಿಯೆ ಬಂಧನಕ್ಕೆ ಬಲೆ ಬೀಸಲಾಗಿದೆ.

Related Articles

Back to top button