ಇತರೆ

ಹನೇಹಳ್ಳಿ ಗ್ರಾಮದ ಕೂರಾಡಿಯಲ್ಲಿ ಜುಗಾರಿ ಅಡ್ಡೆಗೆ ದಾಳಿ: 10 ಮಂದಿ ಬ್ರಹ್ಮಾವರ ಪೊಲೀಸ್ ವಶಕ್ಕೆ

Views: 50

ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರ ತಾಲೂಕಿನ ಹನೇಹಳ್ಳಿ ಗ್ರಾಮದ ಕೂರಾಡಿ ಮೇಲ್ಪೇಟೆ ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿದ್ದು, 10 ಮಂದಿ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹನೇಹಳ್ಳಿ ಗ್ರಾಮದ ಕೂರಾಡಿ ಮೇಲ್ಪೇಟೆ ನಿವಾಸಿ ಕೇಶವ ಕಲ್ಕುರ ಎಂಬುವರ ಜಾಗದ ಬಳಿ ಇರುವ ಹಾಡಿ ಪ್ರದೇಶದಲ್ಲಿ ಸಾರ್ವಜನಿಕವಾಗಿ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಬೀಟ್ ಸಿಬ್ಬಂದಿಯವರಿಂದ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಬ್ರಹ್ಮಾವರ ಠಾಣಾ ಪಿಎಸ್ಐ ರವರ ಸೂಚನೆಯಂತೆ ಎಎಸ್ಐ ವಿಠ್ಠಲ್ ಎಮ್ ಅವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಸ್ಥಳದಲ್ಲಿದ್ದ ಹರೀಶ್, ಗುರುರಾಜ್, ವೆಂಕಟೇಶ್ ಪೂಜಾರಿ, ಹರ್ಷ, ಸುರೇಶ್ ನಾಯ್ಕ, ರಾಜ ನಾಯ್ಕ, ಪೀಟರ್ ಡಿಮೆಲ್ಲೋ, ನಾಗೇಶ, ನಾಗರಾಜ ಹಾಗೂ ರಾಜೇಶ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Related Articles

Back to top button
error: Content is protected !!