ಆರೋಗ್ಯ
ಪಕ್ಷಿಗಳ ನಿಗೂಢ ಸಾವು, ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ, ಎಲ್ಲೆಡೆ ಹೈಅಲರ್ಟ್ ಜಾರಿ

Views: 74
ಕನ್ನಡ ಕರಾವಳಿ ಸುದ್ದಿ: ರಾಯಚೂರಿನಲ್ಲಿ ಪಕ್ಷಿಗಳು ನಿಗೂಢ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಈಗ ಹೈಅಲರ್ಟ್ ಜಾರಿ ಮಾಡಲಾಗಿದೆ.
ಆಂಧ್ರಪ್ರದೇಶ- ತೆಲಂಗಾಣದಲ್ಲಿ ಹಕ್ಕಿ ಜ್ವರ ಧೃಡಪಟ್ಟಿರುವ ಹಿನ್ನೆಲೆಯಲ್ಲಿ ಕೋಳಿ ಫಾರ್ಮ್ ಮಾಲೀಕರು ಎಚ್ಚೆತ್ತುಕೊಂಡು ಫಾರ್ಮ್ ತುಂಬ ಸ್ಯಾನಿಟೇಸರ್ ಸಿಂಪಡಣೆ ಮಾಡಿದ್ದಾರೆ.ಅಷ್ಟೇ ಅಲ್ಲದ ಹೊಸ ವ್ಯಕ್ತಿ ಮತ್ತು ವಾಹನ ಕೋಳಿ ಫಾರ್ಮ್ ಗೆ ಒಳಗಡೆ ಪ್ರವೇಶಕ್ಕೆ ನಿಷೇಧಿಸಲಾಗಿದೆ.ಸ್ಕಾನಿಟೇಸರ್ ಮಾಡಿದ ಬಳಿಕವೇ ವಾಹನಗಳಿಗೆ ಕೋಳಿ ಫಾರ್ಮ್ ಒಳಗೆ ಪ್ರವೇಶ ಕಲ್ಪಿಸಲಾಗುತ್ತಿದೆ
ಈಗ ಹಕ್ಕಿಜ್ವರ ಭೀತಿ ಶುರುವಾದ ಹಿನ್ನೆಲೆ ಕೋಳಿ ಫಾರ್ಮ್ ಗಳನ್ನು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿ ಮುಂಜಾಗ್ರತಾ ಕ್ರಮಗಳು ಪಾಲನೆ ಮಾಡಲು ಕೋಳಿ ಫಾರ್ಮ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ.
ರಾಯಚೂರಿಗೆ ಮಾರ್ಗ ಕಲ್ಪಿಸೊ ಚೆಕ್ ಪೋಸ್ಟ್ ಗಳಲ್ಲಿ ಹೈ ಅಲರ್ಟ್ ಜಾರಿಗೊಳಿಸಿ ಗಡಿ ಭಾಗಗಳಿಂದ ಬರೊ ಕೋಳಿ ಉತ್ಪನ್ನಗಳ ಮೇಲೆ ತೀವ್ರ ನಿಗಾ ವಹಿಸಲು ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ ಆದೇಶಿಸಿದ್ದಾರೆ.