ಜನಮನ
ನೇಕಾರರ ವಿಶೇಷ ಯೋಜನೆಯಡಿ 1.25 ರೂ ದರದಲ್ಲಿ ವಿದ್ಯುತ್: ಸಿದ್ದರಾಮಯ್ಯ

Views: 75
ನೇಕಾರರ ವಿಶೇಷ ಯೋಜನೆ ಅಡಿ ಪ್ರಸ್ತುತ ಜಾರಿಯಲ್ಲಿರುವ 20 H.P ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ವಿದ್ಯುತ್ ಘಟಕಗಳಿಗೆ 1.25 ರೂ ದರದಲ್ಲಿ ವಿದ್ಯುತ್ ಪೂರೈಕೆ ಯೋಜನೆಯನ್ನು ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಭೇಟಿಯಾದ ನೇಕಾರ ಸಮುದಾಯಗಳ ಒಕ್ಕೂಟದ ಬೇಡಿಕೆಗಳಿಗೆ ಸ್ಪಂದಿಸಿ, ಈ ವಿಷಯ ತಿಳಿಸಿದರು. ಇದಲ್ಲದೆ 10 H.P ವರೆಗಿನ ಘಟಕಗಳಿಗೆ 250 ಮಿನಿಟ್ ವರೆಗೆ ವಿದ್ಯುತ್ ಒದಗಿಸಲು ಆಯಾ ಪ್ರದೇಶದಲ್ಲಿ ಘೋಷಣ ಆಗಿದೆ ,ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.