ಧಾರ್ಮಿಕ

ನೂತನ ಶ್ರೀರಾಮ ಮಂದಿರ ಸ್ಫೋಟಿಸುವ ಬೆದರಿಕೆ

Views: 89

ಅಯೋಧ್ಯೆ,ಜನವರಿ 22 ರಂದು ಉದ್ಘಾಟನಾ ಸಮಾರಂಭಕ್ಕೆ ಸಿದ್ಧಗೊಂಡಿರುವ ಭವ್ಯ ನೂತನ ಶ್ರೀರಾಮ ಮಂದಿರವನ್ನು ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ.ಇದು ಆತಂಕಕ್ಕೆ ಕಾರಣವಾಗಿದೆ.

ಕೆಲವು ದಿನಗಳ ಹಿಂದೆ, ಭಾರತೀಯ ಕಿಸಾನ್ ಮಂಚ್ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರ ಇ-ಮೇಲ್ ಐಡಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಯ ಏಜೆಂಟ್ ಬೆದರಿಕೆ ಹಾಕಿರುವುದು ಬಹಿರಂಗವಾಗಿದೆ.

ಡಿಸೆಂಬರ್ 27, ರಂದು, ಪಾಕಿಸ್ತಾನದ ಐಎಸ್‌ಐನೊಂದಿಗೆ ಸಂಪರ್ಕ ಹೊಂದಿರುವ ಜುಬೇರ್ ಖಾನ್ ಅವರು ದೇವೇಂದ್ರ ತಿವಾರಿಗೆ ಇ-ಮೇಲ್ ಕಳುಹಿಸಿದ್ದಾರೆ. ದೇವೇಂದ್ರ ತಿವಾರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಎಸ್‌ಟಿಎಫ್ ಎಡಿಜಿ ಅಮಿತಾಭ್ ಅವರನ್ನು ಗೋ ಸೇವಕರು ಎಂದು ನಿಂದಿಸಿ ಬೆದರಿಕೆ ಹಾಕಲಾಗಿದೆ.

ಇದರೊಂದಿಗೆ ದೇವೇಂದ್ರ ತಿವಾರಿ ಅವರು ತಮ್ಮ ಎಕ್ಸ್ ಖಾತೆಗೆ ಬಂದಿರುವ ಬೆದರಿಕೆ ಇ-ಮೇಲ್‌ನ ಸ್ಕ್ರೀನ್‌ಶಾಟ್ ಪೋಸ್ಟ್ ಮಾಡಿದ್ದಾರೆ. ಯುಪಿ ಪೊಲೀಸರು, ಸಿಎಂ ಯೋಗಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರನ್ನು ಟ್ಯಾಗ್ ಮಾಡಲಾಗಿದೆ. ಈ ಬಗ್ಗೆ ವಿಶೇಷ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ .ತಿವಾರಿ ಅವರ ದೂರಿನ ಪ್ರಕಾರ, ಲಕ್ನೋದ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಹೇಂದ್ರ ಕುಮಾರ್ ಅವರು ಪ್ರಕರಣ ದಾಖಲಿಸಿದ್ದಾರೆ.

ಬೆದರಿಕೆ ಇಮೇಲ್ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಟಿಎಸ್ ಮತ್ತು ಎಸ್‌ಟಿಎಫ್ ತಂಡಗಳೂ ತನಿಖೆಯನ್ನು ಕೈಗೆತ್ತಿಕೊಂಡಿವೆ. ಜುಬೇರ್ ಖಾನ್ ಗಾಗಿ ಹುಡುಕಾಟ ನಡೆದಿದೆ. ಈ ಹಿಂದೆಯೂ ತನಗೆ ಇಂತಹ ಬೆದರಿಕೆ ಮೇಲ್‌ಗಳು ಬಂದಿದ್ದವು ಎಂದು ತಿವಾರಿ ಹೇಳಿದ್ದಾರೆ.

Related Articles

Back to top button