ಕೃಷಿ
ನೀರು ತರಲು ಹೋದಾಗ ಕೃಷಿ ಹೊಂಡದಲ್ಲಿ ಬಿದ್ದು ತಾಯಿ, ಇಬ್ಬರು ಮಕ್ಕಳ ದಾರುಣ ಸಾವು

Views: 46
ಕನ್ನಡ ಕರಾವಳಿ ಸುದ್ದಿ: ಯಾದಗಿರಿ ಜಿಲ್ಲೆಯ ವಡಿಗೇರಾ ತಾಲೂಕಿನ ಕಂಠಿ ಗ್ರಾಮದಲ್ಲಿ ಭೀಕರ ದುರಂತ ನಡೆದಿದೆ. ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮತ್ತು ಇಬ್ಬರು ಪುಟ್ಟ ಮಕ್ಕಳು ದಾರುಣ ಸಾವನ್ನಪ್ಪಿದ್ದಾರೆ.
ನೀಲಾ ಬಾಯಿ (32), ರಾಜೇಶ್ವರಿ (11) ಹಾಗೂ 6 ವರ್ಷದ ಮತ್ತೊಂದು ಹೆಣ್ಣು ಮಗು ಮೃತ ದುರ್ದೈವಿಗಳು.
ನೀಲಾಬಾಯಿ ನೀರು ತರಲು ಹೋಗಿದ್ದಾಗ ಕಾಲು ಜಾರಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಗ್ರಾಮಸ್ಥರು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.