ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಯೆಮನ್‌ನಲ್ಲಿ ಮರಣದಂಡನೆ ಮುಂದೂಡಿದ್ದೇಕೆ?

Views: 236
ಕನ್ನಡ ಕರಾವಳಿ ಸುದ್ದಿ: ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಯೆಮನ್‌ನಲ್ಲಿ ಜು.16ಕ್ಕೆ ಜಾರಿಯಾಗಲಿದ್ದ ಮರಣದಂಡನೆಯನ್ನು ಮುಂದೂಡಲಾಗಿದೆ.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರ ಮಧ್ಯಪ್ರವೇಶದ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ಜಾರಿಗೊಳಿಸಲು ಜುಲೈ 16ಕ್ಕೆ ನಿಗದಿಯಾಗಿತ್ತು. ಈ ನಡುವೆ ಅವರ ರಕ್ಷಣೆಗೆ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರು ಯೆಮನ್‌ನ ಪ್ರಮುಖ ಸೂಫಿ ವಿದ್ವಾಂಸ ಶೇಖ್ ಹಬೀರ್ ಉಮರ್ ಬಿನ್ ಹಾಫಿಝ್ ಅವರ ಮೂಲಕ ನಡೆಸಿದ ಪ್ರಯತ್ನ ಫಲಪ್ರದವಾಗಿದೆ.
ಭಾರತದ ಗ್ರ್ಯಾಂಡ್ ಮುಫ್ತಿ ಎಂದೇ ಕರೆಯಲ್ಪಡುವ ಕೇರಳದ ಪ್ರಭಾವಿ ಸುನ್ನಿ ಸಮುದಾಯದ ಹಿರಿಯ ನಾಯಕ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರು, ಯೆಮೆನನ್ ಸಂತ್ರಸ್ತ ತಲಾಲ್ ಅಬ್ದೊ ಮಹ್ದಿ ಅವರ ಕುಟುಂಬಸ್ಥರೊಂದಿಗೆ ಚರ್ಚೆಗೆ ಮುಂದಾಗಿದ್ದಾರೆ. ಜೀವ ತೆಗೆದಿರುವುದಕ್ಕೆ ಕ್ಷಮೆಗೆ ಬದಲಾಗಿ ಹಣ ತೆಗೆದುಕೊಳ್ಳುವಂತೆ (ಬ್ಲಡ್ಮನಿ) ಮನವೊಲಿಸಲು ಹಿರಿಯ ನಾಯಕ ಅಬೂಬಕರ್ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.






