ಧರ್ಮಸ್ಥಳದ ಆಕಾಂಕ್ಷಾ ಮೃತದೇಹ ಆಗಮನ, ನೂರಾರು ಜನರ ಅಂತಿಮ ದರ್ಶನ

Views: 153
ಕನ್ನಡ ಕರಾವಳಿ ಸುದ್ದಿ: ಪಂಜಾಬ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಧರ್ಮಸ್ಥಳ ಬೊಳಿಯಾರ್ ನಿವಾಸಿ, ಏರೋಸ್ಪೇಸ್ ಉದ್ಯೋಗಿಯಾಗಿದ್ದ ಆಕಾಂಕ್ಷಾ ಎಸ್. ನಾಯರ್(22) ಅವರ ಮೃತದೇಹ ಬುಧವಾರ ಬೆಳಿಗ್ಗೆ ಮನೆಗೆ ತಲುಪಿದೆ.
ಬೊಳಿಯರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂ ದೇವಿ ದಂಪತಿಗಳ ಎರಡನೇ ಪುತ್ರಿ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗಿಯಾಗಿದ್ದ ಆಕಾಂಕ್ಷ ಎಸ್ ನಾಯರ್(22) ಆತ್ಮಹತ್ಯೆ ಪ್ರಕರಣ ಸಂಬಂಧ ಆರೋಪಿ ಪ್ರೊಫೆಸರ್ ಕೇರಳ ಮೂಲದ ಬಿಜಿಲ್‌ಸಿ ಮ್ಯಾಥ್ಯೂ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆಕಾಂಕ್ಷ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ಆ್ಯಂಬುಲೆನ್ಸ್ ಮೂಲಕ ಮೃತದೇಹ ತರಲಾಯಿತು. ಭಾರೀ ಮಳೆಯ ಹಿನ್ನಲೆ ಮನೆಗೆ ಸಾಗುವ ದಾರಿಯಲ್ಲಿ ಆ್ಯಂಬುಲೆನ್ಸ್ ಮಣ್ಣಿನಲ್ಲಿ ಹೂತ ಘಟನೆಯೂ ನಡೆಯಿತು. ಸದ್ಯ ಆಕಾಂಕ್ಷಾ ಮೃತದೇಹ ಬೋಳಿಯಾರ್ನಲ್ಲಿರುವ ಮನೆಗೆ ತಲುಪಿದೆ. ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಹೆಚ್ಚಾಗಿದೆ. ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.