ಸಾಮಾಜಿಕ

ದೇಶದಾದ್ಯಂತ ಮುಸ್ಲಿಂ ಬಾಂಧವರಿಂದ ಶ್ರದ್ಧೆ, ಭಕ್ತಿಯಿಂದ ಬಕ್ರೀದ್ ಆಚರಣೆ

Views: 0

ದೇಶದಾದ್ಯಂತ ಮುಸ್ಲಿಮರು ಶ್ರದ್ಧೆ, ಭಕ್ತಿಯಿಂದ ಗುರುವಾರ ಈದ್- ಉಲ್- ಉಧಾ ಆಚರಿಸಿದರು.

ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಮಕ್ಕಳಿಂದ ಹಿಡಿದು ಹಿರಿಯರು ಸಾಂಪ್ರದಾಯಕ ಬಟ್ಟೆ ಧರಿಸಿ, ತಲೆ ಮೇಲೆ ವಿವಿಧ ವಿನ್ಯಾಸಗಳ ಟೋಪಿ ಧರಿಸಿ ಗಮನಸೆಳೆದರು.

ರಾಷ್ಟ್ರದ ಬಹುತೇಕ ಭಾಗಗಳಲ್ಲಿ ಪ್ರಾರ್ಥನಾ ಮೈದಾನ ಮತ್ತು ಮಸೀದಿಗಳಲ್ಲಿ ತ್ಯಾಗ ಬಲಿದಾನದ ಸಂಕೇತವಾಗಿ ಕುರ್ಬಾನಿ ಸೇವೆ ನಡೆಯಿತು.

ನಮ್ಮಲ್ಲಿರುವುದನ್ನ ಹಂಚಿಕೊಳ್ಳುವುದರೊಂದಿಗೆ ಬಡವರು ಅಸಹಾಯಕರ ಬಗ್ಗೆ ಕಾಳಜಿ ವಹಿಸಿ ತಮ್ಮ ಬದುಕನ್ನು ಸುಖಮಯವಾಗಿರಿಸಿಕೊಳ್ಳುವುದೇ ಈ ಹಬ್ಬದ ವಿಶೇಷವಾಗಿದೆ.

ದೇಶಾದ್ಯಂತ ಪವಿತ್ರ ಬಕ್ರೀದ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರಿಗೆ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮೋದಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಮುಖಂಡರು ಎಲ್ಲಾ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿ ಸಂತೋಷ ಮತ್ತು ಸಮೃದ್ಧಿ ನೀಡಲಿ ಎಂದು ಶುಭ ಹಾರೈಸಿದರು.

Related Articles

Back to top button