ಇತರೆ

ತುಮಕೂರು ನಿಧಿ ವಿಚಾರ ಹತ್ಯೆ:ಕಾರಿನಲ್ಲಿ ಬೆಳ್ತಂಗಡಿಯ ಮೂವರನ್ನು ಸುಟ್ಟಿದ್ದ ಪ್ರಕರಣ; ಇಬ್ಬರ ಬಂಧನ

Views: 124

ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಮೂವರ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಆರು ಮಂದಿ ತಲೆಮರೆಸಿಕೊಂಡಿದ್ದಾರೆ.

ಪ್ರಮುಖ ಆರೋಪಿ ಇಲ್ಲಿನ ಸಿರಾ ಗೇಟ್‌ನ ಸ್ವಯಂ ಘೋಷಿತ ಅರ್ಚಕ ರಾಜು ಅಲಿಯಾಸ್ ರಾಜಗುರು ಕುಮಾರ್ ಅಲಿಯಾಸ್ ಪಾತರಾಜು (35) ಮತ್ತು ಸತ್ಯಮಂಗಲದ ಗಂಗರಾಜು (35) ಎಂಬುವರನ್ನು ಬಂಧಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಎಸ್‌ಡಿಪಿಐ ಸದಸ್ಯ ಸಾಹುಲ್ (45), ಇಸಾಕ್ (56) ಮತ್ತು ಸಿದ್ದಿಕ್ (34) ಫೆಬ್ರವರಿ 22 ರಂದು ಹತ್ಯೆಗೀಡಾಗಿದ್ದು ಕಾರಿನಲ್ಲಿ ಶಿವ ಪತ್ತೆಯಾಗಿದೆ.

ಜಮೀನೊಂದರಲ್ಲಿ ಸಿಕ್ಕ ಚಿನ್ನದ ಒಡವೆ ನೀಡುವುದಾಗಿ ಭರವಸೆ ನೀಡಿ ಸಂತ್ರಸ್ತರಿಂದ 6 ಲಕ್ಷ ರೂ.ಗಳನ್ನು ಪಾತರಾಜು ಪಡೆದಿದ್ದರು. ಅವರು ನೀಡಿದ ಭರವಸೆಯನ್ನು ಈಡೇರಿಸದಿದ್ದಾಗ, ಸಂತ್ರಸ್ತರು ತಮ್ಮ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದರು.

ಗಂಗರಾಜು ಮೂಲಕ ಅರ್ಚಕರು ಸಂತ್ರಸ್ತರನ್ನು ಕೊಲ್ಲಲು ಆರು ಮಂದಿಯನ್ನು ನೇಮಿಸಿಕೊಂಡಿದ್ದರು. ಶವಗಳನ್ನು ಕಾರಿನೊಳಗೆ ತುಂಬಿ ಕೂಚಂಗಿ ಕೆರೆ ಬಳಿ ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿದರು.

 

 

Related Articles

Back to top button