ಸಾಂಸ್ಕೃತಿಕ
ತಾರಕಕ್ಕೇರಿದ ತಂದೆ ಮಗಳ ಜಟಾಪಟಿ, ರಕ್ಷಣೆ ಕೋರಿ ಠಾಣೆ ಮೆಟ್ಟಿಲೇರಿದ ಚೈತ್ರಾ ಕುಂದಾಪುರ ತಂದೆ

Views: 182
ಕನ್ನಡ ಕರಾವಳಿ ಸುದ್ದಿ: ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ಇತ್ತೀಚೆಗೆ ತನ್ನ ಹಲವು ವರ್ಷಗಳ ಸ್ನೇಹಿತ ಶ್ರೀಕಾಂತ್ ನನ್ನು ವಿವಾಹವಾಗಿದ್ದು, ಚೈತ್ರಾ ಮದುವೆ ಬಳಿಕ ಅವರ ತಂದೆ ಬಾಲಕೃಷ್ಣ ನಾಯಕ್ ಮಗಳ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದರು.ಇದೀಗ ಮಗಳ ವಿರುದ್ಧವೇ ತಂದೆ ಕುಂದಾಪುರ ಪೊಲೀಸ್ ಠಾಣೆ ಮೆಟ್ತಿಲೇರಿರುವ ಘಟನೆ ನಡೆದಿದೆ.
ಚೈತ್ರಾ ಕುಂದಾಪುರ ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ನನ್ನ ಜೀವ ತೆಗೆಯಲು ಚೈತ್ರಾ ಕುಂದಾಪುರ ಸುಪಾರಿ ನೀಡಿದ್ದಾರೆ. ನನ್ನ ಆಸ್ತಿ ಹಾಗೂ ಭೂಮಿಗಾಗಿ ನನ್ನನ್ನ ಬಲಿ ಪಡೆಯಬಹುದು. ಭೂಗತ ದೊರೆಗಳ ಮೂಲಕ ಜೀವ ತೆಗೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಆಸ್ತಿಗಾಗಿ ಹೇಯ ಕೃತ್ಯವನ್ನು ಮಾಡಬಹುದು ಎಂದು ಆರೋಪಿಸಿ ಕುಂದಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.