ಇತರೆ
ಟಾಟಾ ಸುಮೊ ವಾಹನದ ಮೇಲೆ ಬಿದ್ದ ಹೆಬ್ಬಂಡೆ; 13 ಜನರು ಸ್ಥಳದಲ್ಲೇ ಸಾವು
Views: 124
ಕನ್ನಡ ಕರಾವಳಿ ಸುದ್ದಿ: ಹಿಮಾಚಲ ಪ್ರದೇಶದ ಚಂಬಾದಲ್ಲಿ ಚಲಿಸುತ್ತಿದ್ದ ಟಾಟಾ ಸುಮೊ ವಾಹನದ ಮೇಲೆ ಬೃಹತ್ ಹೆಬ್ಬಂಡೆ ಉರುಳಿ ಬಿದ್ದ ಪರಿಣಾಮ 13 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವಘಡ ಗಿರಿಜನ ಪ್ರದೇಶ ಕಿಲ್ಲಾರ್–ಉದಯಪುರ ರಸ್ತೆಯ ‘ಕಾಡು ನಾಲಾ’ ಬಳಿ ಸಂಭವಿಸಿದೆ. ಬೆಟ್ಟದ ತುದಿಯಲ್ಲಿದ್ದ ದೊಡ್ಡ ಹೆಬ್ಬಂಡೆ ಇದ್ದಕ್ಕಿದ್ದಂತೆ ಕುಸಿದು ವಾಹನದ ಮೇಲೆ ಬಿದ್ದಿದ್ದರಿಂದ ಸುಮೊ ಸಂಪೂರ್ಣ ನಜ್ಜುಗುಜ್ಜಾಗಿದೆ. ವಾಹನದಲ್ಲಿದ್ದ ಎಲ್ಲಾ 13 ಜನರು ಕೊನೆಯುಸಿರೆಳೆದಿದ್ದಾರೆ.
ನಜ್ಜುಗುಜ್ಜಾದ ವಾಹನದ ಅವಶೇಷಗಳನ್ನು ತೆರವುಗೊಳಿಸಿ, ಪೊಲೀಸರು ಮೃತ ದೇಹಗಳನ್ನು ಹೊರತೆಗೆದಿದ್ದಾರೆ.






