ಇತರೆ

ನಿವೃತ್ತ ಶಿಕ್ಷಕ ಸಾಲಿಕೇರಿ ಸದಾಶಿವ ಶೆಟ್ಟಿಗಾರ ನಿಧನ

Views: 0

ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರದ ನಿವಾಸಿ, ಸಾಲಿಕೇರಿ ಕುಂಚಿಮನೆ ಸದಾಶಿವ ಶೆಟ್ಟಿಗಾರ್ (85) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರಿಗೆ ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸದಾಶಿವ ಶೆಟ್ಟಿಗಾರ ಅವರು ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೊಕ್ತೇಸರರಾಗಿ ಸೇವೆ ಸಲ್ಲಿಸಿರುತ್ತಾರೆ. ಶಾಲಾ ಶಿಕ್ಷಕರಾಗಿ ಸೇವೆಯಿಂದ ನಿವೃತ್ತರಾದ ಇವರು ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿರುತ್ತಾರೆ. ದ.ಕ.ಜಿಲ್ಲಾ ಪದ್ಮಶಾಲಿ ಸಮಾಜ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುತ್ತಾರೆ. ಇವರ ಅತ್ಯುತ್ತಮ ಸಾಧನೆಗೆ ಪ್ರಶಸ್ತಿ ಹಾಗೂ ಹಲವಾರು ಕಡೆ  ಸನ್ಮಾನ ಸ್ವೀಕರಿಸಿದ್ದಾರೆ.

ಮೃತರ ಅಂತಿಮ ವಿಧಿ- ವಿಧಾನಗಳು ಗುರುವಾರ ಬೆಳಿಗ್ಗೆ ಬ್ರಹ್ಮಾವರದ ಸ್ವಗ್ರಹದಲ್ಲಿ ನರವೇರಿಸಲಾಗುವುದು ಎಂದು ಕುಟುಂಬಿಕರು ತಿಳಿಸಿರುತ್ತಾರೆ.

Related Articles

Back to top button
error: Content is protected !!