ಜೈಶ್ರೀರಾಮ್ ಘೋಷಣೆಯೊಂದಿಗೆ ರಾಮನೂರಿನಲ್ಲಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ

Views: 43
ಅಯೋಧ್ಯೆ,- 500 ವರ್ಷಗಳ ನಂತರ ರಾಮಜನ್ಮಭೂಮಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯಾಗುವ ಮೂಲಕ ದೇಶದ ನೂರಾರು ಕೋಟಿ ಜನರ ಕನಸು ನನಸಾಗಿ ಮರ್ಯಾದಾ ಪುರೋಷತ್ತಮ ಭಕ್ತರಿಗೆ ದರ್ಶನ ಕಲ್ಪಿಸಿದ್ದಾನೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರಯೂ ನದಿಯ ತಟದಲ್ಲಿರುವ ರಾಮನೂರಿನಲ್ಲಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ ಜೈಶ್ರೀರಾಮ್ ಘೋಷಣೆ, ಮಂತ್ರ ವೇದಘೋಷಗಳ ನಡುವೆ ಅತ್ಯಂತ ವೈಭವೋಪೇತವಾಗಿ ನೆರವೇರಿತು.
12.30 ನಿಮಿಷ 32 ಸೆಕೆಂಡ್ ಶುಭಗಳಿಗೆ ಅಭಿಜಿತ್ ಮುಹೂರ್ತದಲ್ಲಿ (ಅಭಿಜಿತ್ ಅಂದರೆ ಜಯಶಾಲಿ ಎಂದು ಅರ್ಥ) ಮುಹೂರ್ತದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನೆರವೇರಿತು. ಪ್ರಧಾನಿ ಸಾರಥ್ಯದಲ್ಲಿ ಮೂಲ ವಿಗ್ರಹ ಮುಂದು ವಿಧಿವಿಧಾನಗಳನ್ನು ಅಚಾರ್ಯ ಲಕ್ಷ್ಮಿಕಾಂತ್ ದೀಕ್ಷಿತ್ ಸೇರಿದಂತೆ 121ಧಾರ್ಮಿಕ ಮುಖಂಡರ ಮುಂದಾಳತ್ವದಲ್ಲಿ ಶಂಖ ಜಾಗಟೆಗಳ ಮೊಳಗಿಸಲಾಯಿತು. ಪ್ರಧಾನಿ ನರೇಂದ್ರಮೋದಿಯವರಿಗೆ ಹಣೆಗೆ ತಿಲಕವಿಡಲಾಯಿತು. ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತಾಥ್, ಆರ್‌ಎಸ್ ಎಸ್ ಮುಖ್ಯಸ್ಥ ಮೋಹನ್ ಭಗವಂತ್, ರಾಜ್ಯಪಾಲರಾದ ಆನಂದಿ ಬೆನ್ನ ಪಟೇಲ್ ಹಾಗೂ ಪ್ರಧಾನ ಅರ್ಚಕರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾದರು.ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಿಗದಿಗೂ ಮುನ್ನ ಮೋದಿಯವರು 11 ದಿನಗಳ ಕಾಲ ಕಠಿಣ ವ್ರತ ಆಚರಿಸಿ, ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.ಬಳಿಕ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿ, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಮತ್ತಿತರರಿಗೆ ಉಂಗುರ ಹಾಕಿ ವಿಶೇಷವಾಗಿ ಗೌರವಿಸಲಾಯಿತು.ಶ್ರೀರಾಮಜನ್ಮ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾರಾಜ್ ಮಹಂತ ದಾಸ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಡುಪಿಯ ಪೇಜಾವರ ಮಠದ ಶ್ರೀಗಳು ಸೇರಿದಂತೆ ಕೆಲವೇ ಕೆಲವು ಗಣ್ಯರ ಸಮ್ಮುಖದಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಬಾಲ ಪ್ರತಿಮೆಯ ಪ್ರಾಣ ಪ್ರತಿಷ್ಠಾಪನೆಯ ವಿಧಿ ವಿಧಾನಗಳಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದರು.ಮಂದಿರದ ಹೊರ ಭಾಗದಲ್ಲಿ ಮಾಜಿ ಪ್ರಧಾನಿ ಎಚ್,ಡಿ ದೇವೇಗೌಡರ ಕುಟುಂಬ ಆದಿಯಾಗಿ ಆಹ್ವಾನಿತ ಸಾಧು ಸಂತರು, ಚಿತ್ರತಾರೆಯರು, ಉದ್ಯಮಿಗಳು, ಸೆಲೆಬ್ರಿಟಿಗಳು ಸಾಕ್ಷಿಯಾದರು.ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಉದ್ಘಾಟಿಸಿ, ರಾಮಲಲ್ಲನ ಪ್ರಾಣ ಪ್ರತಿಷ್ಠಾಪನೆ ಮಾಡುವ ಶುಭ ಸಂದರ್ಭದಲ್ಲಿ ದೇಶದ ಉದ್ದಗಲಕ್ಕೂ ಇರುವ ದೇವಾಲಯಗಳು, ಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸುವ ಮೂಲಕ ರಾಮಭಕ್ತರು ತಾವಿದ್ದ ಸ್ಥಳದಲ್ಲಿ ರಾಮನನ್ನು ಕಣ್ಣುತುಂಬಿಕೊಂಡು ಪುನೀತರಾದರು.
ಮತ್ತೊಂದೆಡೆ ದೇಶ ಎಲ್ಲಾ ರೈಲು ನಿಲ್ದಾಣಗಳು ಸೇರಿದಂತೆ ಹಲವು ಕಡೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡುವ ಮೂಲಕ ಜನರು ತಾವಿದ್ದ ಕಡೆ ರಾಮಲಲ್ಲನ ಅಪರೂಪದ ಕ್ಷಣವನ್ನು ಕಂಡು ಭಾವುಕರಾದರು ಒಂದೆಡೆಯಾದರೆ ರಾಮನಾಮದ ಜಪ ಮುಗಿಲು ಮುಟ್ಟಿತ್ತು.
ಸರಯೂ ನದಿಯಲ್ಲಿ ಸ್ಕೂಬ್ ಡೈವರ್ಗಳು , ಸರ್ವ ರೀತಿಯಲ್ಲಿ ಸನ್ನದ್ದರಾಗಿದ್ದು ಹದ್ದಿನ ಕಣ್ಣು ಇಡಲಾಗಿದೆ. ಈ ಮೂಲಕ ಎಲ್ಲೆಲ್ಲಿಯೂ ರಾಮನಾಮ ಕೇಳಿ ಬರುತ್ತಿದ್ದು ಭಕ್ತರ ಸಂತಸ ಮುಗಿಲು ಮುಟ್ಟಿತ್ತು.
ದೇಶದ ಉದ್ದಗಲಕ್ಕೂ ಇರುವ ಸಾಧು ಸಂತರು, ಸ್ವಾಮೀಜಿಗಳು, ಚಿತ್ರತಾರೆಯರು, ಉದ್ಯಮಿಗಳು ಸೇರಿದಂತೆ ಸರಿ ಸುಮಾರು 7 ಸಾವಿರ ಆಹ್ವಾನಿತ ಗಣ್ಯರು ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಾಜಿ ಪ್ರಧಾನಿ ಎಚ್,ಡಿ ದೇವೇಗೌಡ . ಎಚ್.ಡಿ ಕುಮಾರಸ್ವಾಮಿ ಅವರ ಕುಟುಂಬ, ಧರ್ಮಸ್ಥಳದ ಧರ್ಮಾಧಿಕಾರಿ ಡಾ, ವಿರೇಂದ್ರ ಹೆಗ್ಗಡೆ, ರವಿಶಂಕರ್ ಗುರೂಜಿ, ಆದಿ ಚುಂಚನಗಿರಿಯ ಮಠಾಧ್ಯಕ್ಷ ನಿರ್ಮಲಾನಂದ ಸ್ವಾಮಿಜಿ, ಚಿತ್ರನಟರಾದ ಯಶ್ ಮತ್ತು ರಿಷಬ್ ಶೆಟ್ಟಿ ದಂಪತಿಗಳು ಈ ಕ್ಷಣದಲ್ಲಿ ಭಾಗಿಯಾಗಿ ರಾಮನನ್ನು ಕಣ್ತುಂಬಿಕೊಂಡರು.
ಇದರ ಜೊತೆಗೆ ಉದ್ಯಮಿಗಳಾದ ಎನ್ ಆರ್ ನಾರಾಯಣ ಮೂರ್ತಿ, ಮುಖೇಶ್ ಅಂಬಾನಿ, ಗೌತಮ್ ಅದಾನಿ, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೋಹ್ಲಿ ದಂಪತಿ, ಬಾಲಿವುಡ್ ಕಲಾವಿದರಾದ ಅಮಿತಾ ಬಚ್ಚನ್, ಅಭಿಷೇಕ್ ಬಚ್ಚನ್ ಕತ್ರಿಕಾ ಕೈಫ್, ವಿಕ್ಕಿ ವಿಶಾಲ್, ರಣಬೀರ್, ಆಲಿಯಾ ದಂಪತಿ, ಮಾಧುರಿ ದೀಕ್ಷಿತ್ ದಂಪತಿ, ಕಂಗನಾ ರಣಾವತ್, ಅಕ್ಷಯ್ ಕುಮಾರ್, ತೆಲುಗು ಚಿತ್ರರಂಗದ ಮೇರು ನಟ ಮೆಘಾಸ್ಟಾರ್ ಚಿರಂಜೀವಿ. ಸೂಪರ್ ಸ್ಟಾರ್ ರಜನಿಕಾಂತ್ ಕುಟುಂಬ ಸೇರಿದಂತೆ ಆಹ್ವಾನಿತರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ರಾಮ ಜನ್ಮಭೂಮಿ ಮಂದಿರವನ್ನು ಸಾಮಾನ್ಯವಾಗಿ ರಾಮಮಂದಿರ ಎಂದು ಕರೆಯಲಾಗುತ್ತದೆ, ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಉದ್ದ ಪೂರ್ವ-ಪಶ್ಚಿಮ 380 ಅಡಿ ಅಗಲ. ಅಗಲ 250 ಅಡಿ ಮತ್ತು ಎತ್ತರ 161 ಅಡಿ. ಇದು ಒಟ್ಟು 392 ಕಂಬಗಳಿಂದ ನಿರ್ಮಾಣವಾಗಿದೆ. 44 ಬಾಗಿಲುಗಳನ್ನು ಹೊಂದಿದೆ.
ದೇವಾಲಯದ ಕಂಬಗಳು ಮತ್ತು ಗೋಡೆಗಳು ಹಿಂದೂ ದೇವತೆಗಳು, ದೇವರುಗಳು ಮತ್ತು ದೇವತೆಗಳ ಸಂಕೀರ್ಣವಾದ ಕೆತ್ತನೆಯ ಚಿತ್ರಣ ದರ್ಶಿಸುತ್ತವೆ. ರಾಮಮಂದಿರದ ನೆಲ ಮಹಡಿಯಲ್ಲಿರುವ ಮುಖ್ಯ ಗರ್ಭಗುಡಿಯಲ್ಲಿ ರಾಮ ಲಲ್ಲಾನ ವಿಗ್ರಹ ಇರಿಸಲಾಗಿದೆ.
ರಾಮ್ ಲಲ್ಲಾನ ಹೊಸ 15ಇಂಚಿನ ವಿಗ್ರಹದ ’ಪ್ರಾಣ-ಪ್ರತಿಷ್ಠಾ’ಕ್ಕೆ ದೇಶದ ವಿವಿಧ ಭಾಗಗಳಿಂದ ಹದಿನಾಲ್ಕು ದಂಪತಿಗಳು ’ಯಜಮಾನ್‌ಗಳು’ (ಆತಿಥೇಯರು) ಆಗಿರುತ್ತಾರೆ. ಮೈಸೂರು ನಿವಾಸಿ ಅರುಣ್ ಯೋಗಿರಾಜ್ ವಿಗ್ರಹ ಕೆತ್ತನೆ ಮಾಡಿದ್ದಾರೆ.
ಅಡ್ವಾಣಿ ಗೈರು
ರಾಮಮಂದಿರಕ್ಕಾಗಿ ರಥಯಾತ್ರೆ ನಡೆಸಿದ್ದ ಮುಂಚೂಣಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ವಯೋಸಹಜ ಮತ್ತು ತೀವ್ರ ಚಳಿಯ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದರು. ಮತ್ತೊಬ್ಬ ಹೋರಾಟಗಾರ ಮುರುಳಿ ಮನೋಹರ ಜೋಷಿ ಕೂಡ ಗೈರು ಹಾಜರಿ ಎದ್ದು ಕಾಣುತ್ತಿತ್ತು
ರಾಮಮಂದಿರಕ್ಕಾಗಿ ಹೋರಾಟ ಮಾಡಿದ ಪ್ರಮುಖ ನಾಯಕರು, ಕರಸೇವಕರು ಅಪರೂಪದ ಕ್ಷಣದಲ್ಲಿ ಭಾಗಿಯಾಗಿದ್ದರು
ರಾಮಮಂದಿರದಲ್ಲಿ ರಾಮ ಲಲ್ಲನಾ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಾ ಮಸ್ತಕಾಭಿಷೇಕದ ಸಂಕಲ್ಪದಲ್ಲಿ ಭಾಗಿಯಾಗಿ ಪುನೀತರಾದರು.ಪ್ರಧಾನಿ ಅವರೊಂದಿಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಿದರುಕಾಶಿ ದೊಂ ರಾಜಾ ಅನಿಲ್ ಚೌಧರಿ ಸೇರಿದಂತೆ ದೇಶಾದ್ಯಂತದ 15 ಜನರು ರಾಮ ಮಂದಿರದಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾಗಿಯಾಗಿದ್ದರು.ತಾಯಿ ಜಮುನಾ ದೇವಿ ಮತ್ತು ಪತ್ನಿ ಸಪ್ನಾ ಚೌಧರಿ ಸೇರಿದಂತೆ ಕಾಶಿ ದೋಮ್, ರಾಜ ಚೌಧರಿ ಮತ್ತು ಅವರ ಕುಟುಂಬ ಸದಸ್ಯರು ಅಯೋಧ್ಯೆಗೆ ತಲುಪಿದ್ದಾರೆ.ಧಾರ್ಮಿಕ ಮೆರವಣಿಗೆಯನ್ನು ತೆಗೆದುಕೊಳ್ಳಲಾಯಿತು. ಕುಟುಂಬ ಸದಸ್ಯರು ಬೆಳ್ಳಿಯ ’ತ್ರಿಶೂಲ’ ಮತ್ತು ರಾಮಮಂದಿರದ ಕಾಣಿಕೆ ಹೊತ್ತೊಯ್ದರು.
ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ದೇಶಾದ್ಯಂತ ವಿವಿಧ ದೇವಾಲಯಗಳಿಂದ ಸಾಮಾನ್ಯ ಜನರೊಂದಿಗೆ ಸಮಾರಂಭ ನೇರಪ್ರಸಾರ ವೀಕ್ಷಿಸಿದರು.ಏತನ್ಮಧ್ಯೆ ಬಿಜೆಪಿ ನಾಯಕರು ವಿವಿಧ ದೇವಾಲಯಗಳಿಂದ ಸಮಾರಂಭವನ್ನು ನೇರಪ್ರಸಾರ ವೀಕ್ಷಿಸಿದರು. ಷಾ ಅವರು ತಮ್ಮ ಕುಟುಂಬದೊಂದಿಗೆ ಬಿರ್ಲಾ ದೇವಸ್ಥಾನದಿಂದ ಮೂರು ಗಂಟೆಗಳ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಿ ಪುನೀತರಾದರು.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ದೆಹಲಿಯ ಝಂಡೆವಾಲನ್ ದೇವಸ್ಥಾನದಲ್ಲಿ ಇರಲಿದ್ದಾರೆ. ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ರವಿಶಂಕರ್ ಪ್ರಸಾದ್ ಸೇರಿದಂತೆ ನ್ಯಾಯಾಲಯದ ಮೊಕದ್ದಮೆಯಲ್ಲಿ ಹೋರಾಡಿದವರು, ಪಕ್ಷದ ಕೆಲವು ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು
ಮಂದಿರ ಮಾರ್ಗ, ರಾಷ್ಟ್ರ ರಾಜಧಾನಿಯಲ್ಲಿ ಮತ್ತು ’ಪ್ರಾಣ ಪ್ರತಿಷ್ಠಾ’ನ ಸಮಾರಂಭ ನಡೆಯುವಾಗ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿ ಆಚರಿಸಲಾಯಿತು.