ಸಾಂಸ್ಕೃತಿಕ
ಜುಲೈ 27: ಕೊರ್ಗಿ-ಕಾಳಾವರ ಲಯನ್ಸ್ ಕ್ಲಬ್ ಪದ ಪ್ರದಾನ ಸಮಾರಂಭ

Views: 2
ಕೋಟೇಶ್ವರ :ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಇದರ ಲಯನ್ಸ್ ಕ್ಲಬ್ ಕೊರ್ಗಿ -ಕಾಳಾವರ, 2023- 24ನೇ ಸಾಲಿನ ಪದ ಪ್ರದಾನ ಸಮಾರಂಭ ಜುಲೈ 27ರಂದು ಸಂಜೆ 7 ಗಂಟೆಗೆ ಹಾಲಾಡಿ ರಸ್ತೆಯ ಪಕ್ಕದಲ್ಲಿರುವ ಕೋಟೇಶ್ವರದ ಕಂದಾವರ ಅಡಿಟೋರಿಯಂ ನಲ್ಲಿ ನಡೆಯಲಿದೆ.
2023-24ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಕೆ. ರತ್ನಾಕರ ಶೆಟ್ಟಿ, ಕಾರ್ಯದರ್ಶಿ ಸುದೀರ್ ಶೆಟ್ಟಿ, ಕೋಶಾಧಿಕಾರಿ ಸುಖಾನಂದ ಹೆಗ್ಡೆ ಹಾಗೂ ಇತರ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಲಿದೆ.
ಪದ ಪ್ರಧಾನ ಸಮಾರಂಭದಲ್ಲಿ ಅಧಿಕಾರಿ ಸ್ವಪ್ನಾ ಸುರೇಶ್, ದ್ವಿತೀಯ ಉಪ ಜಿಲ್ಲಾ ರಾಜ್ಯಪಾಲ ಅವರು ನೂತನ ಪದಾದಿಕಾರಿಗಳಿಗೆ ಪದಗ್ರಹಣ ನೆರವೇರಿಸಿ, ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.
ನಿಕಟ ಪೂರ್ವ ಅಧ್ಯಕ್ಷ ದಿನಕರ ಹೆಗ್ಡೆ, ಕಾರ್ಯದರ್ಶಿ ನಾಗರಾಜ್ ಹೊಸಮಠ, ಕೋಶಾಧಿಕಾರಿ ಸುಜಿತ್ ಶೆಟ್ಟಿ ,ಇನ್ನಿತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿರಲಿದ್ದಾರೆ ಎಂದು ನೂತನ ಅಧ್ಯಕ್ಷ ಕೆ.ರತ್ನಾಕರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.