ಸಾಂಸ್ಕೃತಿಕ

ಚಿತ್ರದ ನಾಯಕಿಯ ದೇಹದಾಕಾರದ ಬಗ್ಗೆ ಮಾತನಾಡಲು ಹೋಗಿ ಕೆಂಗಣ್ಣಿಗೆ ಗುರಿಯಾದ ನಿರ್ದೇಶಕ!

"ತೆಲುಗು ಚಿತ್ರರಂಗಕ್ಕೆ ಇದು ಸಾಕಾಗಲ್ಲ,ನಮ್ಮಲ್ಲಿ ದೊಡ್ಡದಾಗಿರಬೇಕು"  ನಟಿಯ 'ಸೈಜ್' ಬಗ್ಗೆ ನಿರ್ದೇಶಕನ ಅಸಹ್ಯ ಹೇಳಿಕೆ.. ಸೋಶಿಯಲ್ ಮೀಡಿಯಾದಲ್ಲಿ ವೈರಲ್

Views: 147

ಕನ್ನಡ ಕರಾವಳಿ ಸುದ್ದಿ: ಬಾಯಿ ಚಪಲ ತೀರಿಸಿಕೊಳ್ಳಲು ನಟಿಯ ಬಗ್ಗೆ ಹಗುರವಾಗಿ ಮಾತನಾಡಲು ಹೋಗಿ ನಿರ್ದೇಶಕರೊಬ್ಬರು ವಿವಾದಕ್ಕೀಡಾಗಿದ್ದಲ್ಲದೆ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ತೆಲುಗಿನಲ್ಲಿ ‘ಮಜಾಕಾ’ ಎಂಬ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ತ್ರಿನಾಧ ರಾವ್ ನಕ್ಕಿನ್ ಈ ಚಿತ್ರದ ನಿರ್ದೇಶಕ. ಸಂದೀಪ್ ಕಿಶನ್, ರಿತು ವರ್ಮಾ, ಮತ್ತು ಅಂಶು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನೆರವೇರಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ತ್ರಿನಾಧ ರಾವ್ ನಕ್ಕಿನ್ ಚಿತ್ರದ ನಾಯಕಿ ಅಂಶು ಅವರ ದೇಹದಾಕಾರದ ಬಗ್ಗೆ ಮಾತನಾಡಿದ್ದಾರೆ. ಸದ್ಯ ಇವರು ಆಡಿದ ಮಾತು ಅನೇಕರನ್ನು ಕೆರಳಿಸಿವೆ.

ಕಾರ್ಯಕ್ರಮದಲ್ಲಿ ಮಾತು ಶುರು ಮಾಡಿದ ತ್ರಿನಾಧ ರಾವ್ ನಕ್ಕಿನ್ ಮನ್ಮಥುಡು ಚಿತ್ರ ನೋಡುವ ಸಮಯದಲ್ಲಿ ಈ ಹುಡುಗಿ ಲಡ್ಡು ತರ ಇದ್ದಳು ಆದರೆ ಈಗ ತೆಳ್ಳಗಾಗಿದ್ದಾಳೆ. ಹೀಗಿದ್ದರೆ ತೆಲುಗು ಚಿತ್ರರಂಗಕ್ಕೆ ಸಾಕಾಗುವುದಿಲ್ಲ. ನಮ್ಮಲ್ಲಿ ದೊಡ್ಡದಾಗಿರಬೇಕು ಎಂದು ಹೇಳಿದ್ದಾರೆ. ಮುಂದುವರೆದು ಈ ಕಾರಣಕ್ಕೆ ನಾನು ತೂಕ ಜಾಸ್ತಿ ಮಾಡ್ಕೋ ಚೆನ್ನಾಗಿ ತಿನ್ನುವುದನ್ನು ಕಲಿ ಎಂದು ಹೇಳಿದ್ದೆ, ಪರವಾಗಿಲ್ಲ ಈಗ ಸುಧಾರಿಸಿದ್ದಾಳೆ ಮುಂದೆ ಇನ್ನೂ ಹೆಚ್ಚು ಸುಧಾರಿಸುತ್ತಾಳೆ ಎಂದಿದ್ದಾರೆ.

ನಿರ್ದೇಶಕ ವೇದಿಕೆ ಮೇಲೆ ಆಡಿದ ಈ ಮಾತುಗಳನ್ನು ಕೇಳಿದ ನಾಯಕಿ ಅಂಶು ಕಾರ್ಯಕ್ರಮದಲ್ಲಿ ಮುಜುಗರಕ್ಕೀಡಾಗಿದ್ದಾರೆ. ನಕ್ಕು ಸುಮ್ಮನಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಿರ್ದೇಶಕ ತ್ರಿನಾಧ ವಿರುದ್ದ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಹೆಣ್ಣಿನ ಬಗ್ಗೆ ವೇದಿಕೆಯಲ್ಲಿ ಈ ತರ ಮಾತನಾಡುವುದು ಅಸಹ್ಯಕರ ಎಂದು ಹೇಳಿದರೆ ಇನ್ನು ಕೆಲವರು ಆ ವ್ಯಕ್ತಿಯ ಕೀಳು ಮನಸ್ಥಿತಿಗೆ ಅವರಾಡಿದ ಈ ಮಾತುಗಳೇ ಕೈಗನ್ನಡಿ ಎಂದಿದ್ದಾರೆ. ಅಶ್ಲೀಲ ಹಾಗೂ ಅವಹೇಳನಾಕಾರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲಿಯೇ ಅಂಶು ನಿರ್ದೇಶಕನನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮಾತುಗಳಿಂದ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Related Articles

Back to top button