ಸಾಂಸ್ಕೃತಿಕ

ನಿಗೂಢವಾಗಿ ಸಾವಿಗೀಡಾದ ಮಾಡೆಲ್, ನಟಿ ತ್ವಿಷಾ ಶರ್ಮಾ: ಶಾಕಿಂಗ್ ಮಾಹಿತಿ

Views: 44

ಕನ್ನಡ ಕರಾವಳಿ ಸುದ್ದಿ: ಭೂಪಾಲ್‌ನಲ್ಲಿ ನಿಗೂಢವಾಗಿ ಸಾವಿಗೀಡಾದ ಮಾಡೆಲ್, ನಟಿ ತ್ವಿಷಾ ಶರ್ಮಾ (33) ಪ್ರಕರಣದಲ್ಲಿ ಸದ್ಯ ಶಾಕಿಂಗ್ ಮಾಹಿತಿಗಳು ಹೊರಬೀಳುತ್ತಿವೆ.

ಪತಿ ವಕೀಲ ಸಮರ್ಥ್ ಸಿಂಗ್ ಮತ್ತು ಅತ್ತೆ ನೀಡುತ್ತಿದ್ದ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮದುವೆಯಾದ ಐದು ತಿಂಗಳಿಗೆ ತ್ವಿಷಾ ಆತ್ಮಹತ್ಯೆಗೆ ಶರಣಾದರು ಎನ್ನಲಾಗಿದೆ.

ಸಾವಿಗೂ ಮುನ್ನ ಆಕೆ ತನ್ನ ತಾಯಿಗೆ ಕಳುಹಿಸಿದ್ದಾರೆ ಎನ್ನಲಾದ ಸಂದೇಶಗಳಲ್ಲಿ, ಪತಿಯ ಮನೆಯಲ್ಲಿ ಅನುಭವಿಸುತ್ತಿದ್ದ ತೀವ್ರ ಮಾನಸಿಕ ಕಿರುಕುಳದ ಬಗ್ಗೆ ಅಳಲು ತೋಡಿಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ಪ್ರಸ್ತುತ ನಿರೀಕ್ಷಣಾ ಜಾಮೀನು ಪಡೆದು ಹೊರಬಂದಿರುವ ನಿವೃತ್ತ ನ್ಯಾಯಾಧೀಶೆ ತ್ವಿಷಾ ಅತ್ತೆ ಗಿರಿಬಾಲಾ ಸಿಂಗ್, ಆಕೆ ಗರ್ಭಿಣಿ ಆಗಿದ್ದಾಗ ಡ್ರಗ್ಸ್ ಸೇವನೆ ಮಾಡುತ್ತಿದ್ದಳು. ಮನೋವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಳು. ಆಕೆಯ ಪೋಷಕರು ತಿಂಗಳುಗಟ್ಟಲೆ ದೂರವಿದ್ದರು. ಕಳೆದ ಐದು ತಿಂಗಳಿನಿಂದ ಸೊಸೆಯ ಹೆತ್ತವರು ಮಗಳನ್ನು ನೋಡಲು ಬಂದಿಲ್ಲ. ತ್ವಿಷಾಳ ಸೌಂದರ್ಯದಿಂದಾಗಿ ಇಷ್ಟು ದಿನ ಅವರು ಹಣ ಸಂಪಾದಿಸುತ್ತಿದ್ದರು. ಈಗ ಅವಳ ಅಂತ್ಯಕ್ರಿಯೆಗೂ ಅವಕಾಶ ನೀಡುತ್ತಿಲ್ಲ. ತನಿಖಾ ಸಂಸ್ಥೆಗಳು ಮತ್ತು ಸತ್ಯದಲ್ಲಿ ನನಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

“ತ್ವಿಶಾ ಅವರ ಪೋಷಕರು ಆಕೆಯನ್ನು ಚಿಕ್ಕ ವಯಸ್ಸಿನಲ್ಲಿಯೇ ಬಣ್ಣದ ಜಗತ್ತಿಗೆ ನೂಕಿದರು. ಈಗ ನೋಡಿದ್ರೆ ಹೀಗೆ ಮಾತನಾಡುತ್ತಾರೆ. ಸೊಸೆ ಗರ್ಭಾವಸ್ಥೆಯಲ್ಲಿ ಇದ್ದಾಗಲೇ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಸೇವಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆಕೆಯ ಅಗಲಿಕೆಯಿಂದ ನಮಗೂ ದೊಡ್ಡ ನಷ್ಟ ಉಂಟಾಗಿದೆ. ಏನೇ ಆಗಿರಲಿ, ಅವಳನ್ನು ಕಳೆದುಕೊಂಡ ದುಃಖ ನಮ್ಮ ಕುಟುಂಬಕ್ಕೂ ಕಾಡುತ್ತಿದೆ. ಆಕೆಯಲ್ಲಿ ಕೆಲವು ದೈಹಿಕ ಲಕ್ಷಣಗಳನ್ನು ನಾವು ಗಮನಿಸಿದ್ದೇವೆ. ತ್ವಿಷಾಳ ಕೈಗಳಲ್ಲಿ ಸ್ವಲ್ಪ ನಡುಕವಿತ್ತು. ಒಟ್ಟಾರೆ, ಅವಳು ತನ್ನ ಜೀವನವನ್ನೇ ನಾಶ ಮಾಡಿಕೊಂಡಳು ಎಂದಿದ್ದಾರೆ.

ಏನಿದು ಪ್ರಕರಣ?

ಮಗಳ ಸಾವಿನ ಬಗ್ಗೆ ನೆನೆದು ಕಣ್ಣೀರಿಟ್ಟ ತಂದೆ ನವನಿಧಿ ಶರ್ಮಾ, ಅಧಿಕಾರದ ಅಹಂಕಾರದಲ್ಲಿ ಪ್ರಕರಣದ ದಿಕ್ಕನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನೋಡಿ, ಈ ಕಾಲದಲ್ಲಿ, ವರದಕ್ಷಿಣೆ ಎಂದರೆ ಹೆಸರೆತ್ತದ ಜನ, ಅದನ್ನು ಬಳಸದೆ ವಿವಿಧ ರೀತಿಯಲ್ಲಿ ಬೇಡಿಕೆ ಮುಂದಿಡುತ್ತಾರೆ. ನಿಮ್ಮ ಜೇಬಿನಿಂದ ಹಣವನ್ನು ಕೀಳುವ ಪರಿಸ್ಥಿತಿಯನ್ನು ಸೃಷ್ಟಿಸುತ್ತಾರೆ. ಯಾರೂ ನಿಮಗೆ ವರದಕ್ಷಿಣೆ ಕೊಡಿ ಎಂದು ಬಾಯ್ದಿಟ್ಟು ಕೇಳುವುದಿಲ್ಲ ಎಂದರು.

ಮದುವೆಯ ನಂತರ, ಮಗಳನ್ನು ಲೇವಡಿ ಮಾಡೋದು, ಪದೇ ಪದೇ ಚುಚ್ಚಿ ಮಾತನಾಡೋದು ಮಾಡಿದ್ದಾರೆ. ಇದರಿಂದ ಆಕೆ ತನ್ನ ಕೆಲಸವನ್ನು ಕಳೆದುಕೊಂಡಳು. ಇದಾದ ನಂತರ ಪರಿಸ್ಥಿತಿ ತೀರ ಹದಗೆಟ್ಟಿತು. ಕುರಿಯ ವೇಷದಲ್ಲಿ ನರಿಗಳಿದ್ದಂತೆ ಇವರು. ಅವರ ಹಿನ್ನೆಲೆಯನ್ನು ಸರಿಯಾಗಿ ಗಮನಿಸಿದರೆ, ಸಮರ್ಥ್ ಸಿಂಗ್‌ನ ಮೊದಲ ಹೆಂಡತಿ ಕೂಡ ಮಾನಸಿಕ ಚಿತ್ರಹಿಂಸೆಯಿಂದಲೇ ಡಿವೋರ್ಸ್ ನೀಡಿದ್ದಾರೆ ಎಂದು ಆರೋಪಿಸಿದರು. ಕಟಾರಾ ಹಿಲ್ಸ್‌ನಲ್ಲಿನ ತಮ್ಮ ಪತಿ, ವಕೀಲ ಸಮರ್ಥ್ ಸಿಂಗ್ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಈ ಜೋಡಿ, ಕಳೆದ ಡಿಸೆಂಬರ್‌ನಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ಸಾವಿಗೂ ಮುನ್ನ ತಾಯಿಗೆ ಮೆಸೇಜ್ ಮಾಡಿದ್ದ ತ್ವಿಷಾ, ‘ಅಮ್ಮ ನನ್ನ ಜೀವನ ನರಕವಾಗಿದೆ.

ದಯವಿಟ್ಟು ನನ್ನನ್ನು ಇಲ್ಲಿಂದ ಕರೆದುಕೊಂಡುಹೋಗಿ, ಅವರು ನನ್ನನ್ನು ಬದುಕಲು ಬಿಡುವುದಿಲ್ಲ. ನನಗಿಲ್ಲಿ ಉಸಿರುಗಟ್ಟುತ್ತಿದೆ’ ಎಂದು ಬೇಡಿಕೊಂಡಿದ್ದರು.

ಸ್ನೇಹಿತರೊಂದಿಗಿನ ಚಾಟ್‌ಗಳಲ್ಲಿಯೂ ಆಕೆ ಅಸಹಾಯಕತೆ ವ್ಯಕ್ತಪಡಿಸಿದ್ದರು. ಮದುವೆ ಆದಾಗಿನಿಂದಲೂ ವರದಕ್ಷಿಣೆಗಾಗಿ ನಿರಂತರ ಮಾನಸಿಕ ಕಿರುಕುಳ ಹಾಗೂ ಚಾರಿತ್ರ್ಯಹನನ ಮಾಡಲಾಗುತ್ತಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ,

Related Articles

Back to top button
error: Content is protected !!