ಇತರೆ

ಚಾರ್ಮಾಡಿ ಘಾಟ್ ನಲ್ಲಿ ಕೆಳಕ್ಕೆ ಬಿದ್ದ ಕಾರು, ಚಕ್ರ ಕಿತ್ತುಕೊಂಡು ಹೋದ ಕಳ್ಳರು

Views: 143

ಘಾಟ್‌ನ  ಬಳಿ ಕಾರು ಅಪಘಾತವಾಗಿದ್ದು, ಕಾರು  ಪ್ರಪಾತಕ್ಕೆ ಉರುಳಿ ಬಿದ್ದಿದೆ. ಘಾಟ್‌ ರಸ್ತೆಯಲ್ಲಿ ರಸ್ತೆಯ ತಡೆಗೋಡೆ ಇಲ್ಲದ ತಿರುವು ಬಳಿ ಈ ಅಪಘಾತ ಸಂಭವಿಸಿದ್ದು, ಆರು ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಇದ್ದ ಪ್ರಯಾಣಿಕರು ಚಿತ್ರದುರ್ಗ ಮೂಲದವರಾಗಿದ್ದು, ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮಲಯ ಮಾರುತ ಬಳಿ ಮಂಜು ತುಂಬಿದ್ದ ಕಾರಣ ರಸ್ತೆ ಸರಿಯಾಗಿ ಕಾಣಿಸಿರಲಿಲ್ಲ. ಹೀಗಾಗಿ ಚಾಲಕನ ನಿಯಂತ್ರಣ ತಪ್ಪಿದ್ದು, ತಡೆಗೋಡೆ ಇಲ್ಲದ ಕಾರಣ ಕಾರು ಪ್ರಪಾತಕ್ಕೆ ಉರುಳಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಪ್ರಪಾತದಲ್ಲಿ ಬಿದ್ದಿದ್ದು, ತಕ್ಷಣ ಸ್ಥಳಿಯರು ಹಾಗೂ ಬೇರೆ ವಾಹನಗಳ ಪ್ರಯಾಣಿಕರು ರಕ್ಷಣೆಗೆ ದಾವಿಸಿದ್ದಾರೆ. ಕಾರಿನಿಂದ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ.

ಡಿಸ್ಕ್ ಸಮೇತ ಕಾರಿನ ನಾಲ್ಕು ಚಕ್ರ ಬಿಚ್ಚಿರೋ ಕಿಡಿಗೇಡಿಗಳು ಹಿಡಿದುಕೊಂಡು ಹೋಗಿದ್ದಾರೆ. ಇನ್ನು ಕಾರು ಮಕಾಡೆ ಬಿದ್ದದ್ದು ಕೂಡಾ ಕಾರಿನ ಟಯರ್ ಕೀಳಲು ಕಳ್ಳರಿಗೆ ಹೆಚ್ಚು ಅನುಕೂಲವಾಗಿದೆ.

 

 

Related Articles

Back to top button